
ವಿದ್ಯಾರ್ಥಿಗಳ ಸಮಸ್ಯೆ ಸರಕಾರದ ಮಟ್ಟಕ್ಕೆ ತಲುಪಿಸಿ ಪರಿಹಾರ ಕೊಡುವ ಕಾರ್ಯಕ್ರಮಕ್ಕೆ ರಫೀಕ್ ಅಲಿ ಚಾಲನೆ.
News Details
ಸಿದ್ದಾಪುರ : ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಪಟ್ಟಿಮಾಡಿ ಸರ್ಕಾರ ಮಟ್ಟಕ್ಕೆ ತಲುಪಿಸಿ ಅದಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಎನ್ ಎಸ್ ಯು ಐ ರಾಜ್ಯ ಅಧ್ಯಕ್ಷ ಕೀರ್ತಿ ಗಣೇಶ ರವರ ನೇತೃತ್ವದಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ ನ್ಯಾಯ ಯಾತ್ರೆಗೆ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ರಾಜ್ಯ ಉಪಾಧ್ಯಕ್ಷ ರಫೀಕ್ ಅಲಿ ಸಿರ್ಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಆಯ್ದ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಅಧ್ಯಕ್ಷ ವಿಶ್ವಾಸ ಗೌಡ ಮಾತನಾಡಿ ಈ ಹಿಂದೆಯೂ ಸಹ ನಮ್ಮ ಸಂಘಟನೆ ವತಿಯಿಂದ ಹಲವಾರು ಹೋರಾಟ ಮಾಡಿ ಸೌಲಭ್ಯ ಒದಗಿಸಿ ಕೊಟ್ಟಿದ್ದೇವೆ ಮುಂದೆಯೂ ಸಹ ನಿಮ್ಮೊಂದಿಗೆ ಇರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಹರೀಶ್ ನಾಯ್ಕ, ವಕೀಲ ಸುದರ್ಶನ ನಾಯ್ಕ, ಅನಿಲ್ ಕೊಠಾರಿ, ಎನ್. ಎಸ್. ಯು. ಐ ನ ಪೂರ್ಣ ನಾಯ್ಕ ಪುರಂದರ ನಾಯ್ಕ ಪುನೀತ್, ಸುಹಾಸ್, ವಿಜೇತ, ಚರಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.