Loading...
  • aksharakrantinagarajnaik@gmail.com
  • +91 8073197439
Total Visitors: 2384
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-19

ಉತ್ತರ ಕನ್ನಡದ ಗ್ರಾಮ ಪಂಚಾಯತಗಳಿಗೆ ಡಿಜಿಟಲ್ ಬಣ್ಣ: ಕಾಗದಗಳ ಯುಗಕ್ಕೆ ವಿದಾಯ!

News Details

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲು ಜಿಲ್ಲಾ ಪಂಚಾಯತ ಆಸಕ್ತಿವಹಿಸಿದೆ. ಡಿಜಿಟಲ್ ವ್ಯವಸ್ಥೆ ಜಾರಿಯಾದ ನಂತರ ಗ್ರಾಮ ಪಂಚಾಯತದಲ್ಲಿನ ಕಾಗದ ಪತ್ರಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ!

ಗ್ರಾಮ ಪಂಚಾಯತಗೆ ಸಲ್ಲಿಕೆಯಾಗುವ ಎಲ್ಲಾ ಕಾಗದಪತ್ರಗಳನ್ನು ಸ್ಕಾನ್ ಮಾಡಿ ದಾಖಲೀಕರಣ ಮಾಡಿಕೊಳ್ಳುವುದು ಇ-ಆಫೀಸ್ ವಿಧಾನದ ಮೊದಲ ಕೆಲಸ. ಕಂಪ್ಯುಟರ್ ಹಾಗೂ ಆನ್‌ಲೈನ್ ಮೂಲಕವೇ ಕಚೇರಿ ಕಡತ ವಿಲೇವಾರಿ ನಡೆಸುವುದು ಮುಂದಿನ ಕೆಲಸ. ಇ-ವಿಧಾನದಿಂದ ಕಚೇರಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬಹುದು ಎಂಬುದು ಸರ್ಕಾರದ ನಂಬಿಕೆ.

ಸಾರ್ವಜನಿಕರು ನೀಡುವ ಅರ್ಜಿಗಳಿಗೆ ಆನ್‌ಲೈನ್ ಮೂಲಕ ಒಂದು ಸಂಖ್ಯೆ ನೀಡಲಾಗುತ್ತದೆ. ಆ ಸಂಖ್ಯೆ ಆಧಾರದಲ್ಲಿ ಜನ ಕಡತಗಳ ಪರಿಶೀಲನೆ, ಕೆಲಸ ಯಾವ ಹಂತದಲ್ಲಿದೆ? ಎಂಬ ಬಗ್ಗೆ ಮಾಹಿತಿ ಪಡೆಯಲು ಇದು ಅನುಕೂಲವಾಗಲಿದೆ. ಗ್ರಾಮ ಪಂಚಾಯತದ ಕರ ವಸೂಲಿಗೆ ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದ್ದು, ಭವಿಷ್ಯದಲ್ಲಿ ಅದೇ ಮಾದರಿಯಲ್ಲಿ ಇತರೆ ಕೆಲಸಗಳು ನಡೆಯುವ ಸಾಧ್ಯತೆಗಳಿವೆ. ಜನನ-ಮರಣ ನೋಂದಣಿ, ನಿರಪೇಕ್ಷಣಾ ಪತ್ರ ಸೇರಿ ಎಲ್ಲಾ ಕಾಗದ ಪತ್ರಗಳು ಆನ್‌ಲೈನ್ ಆಗುವುದರಿಂದ ಜನರ ಅಲೆದಾಟ ಕಡಿಮೆಯಾಗುವ ಲಕ್ಷಣಗಳಿವೆ.

ಕಂದಾಯ ಇಲಾಖೆಯ ಬಹುತೇಕ ಕಡೆ ಈಗಾಗಲೇ ಇ-ಆಫೀಸ್ ವ್ಯವಸ್ಥೆ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ 125 ಗ್ರಾಮ ಪಂಚಾಯತಗಳು ಇ- ಆಫೀಸ್ ವ್ಯವಸ್ಥೆ ಅಳವಡಿಸಿಕೊಂಡು ಅರ್ಜಿ ವಿಲೇವಾರಿ ಶುರು ಮಾಡಿವೆ. ಕರ್ನಾಟಕ ಸರ್ಕಾರ ಆಡಳಿತ ಸುಧಾರಣೆಗಾಗಿ 2021ರಲ್ಲಿಯೇ ಇ-ಆಫೀಸ್ ವಿಧಾನಕ್ಕೆ ಒತ್ತು ನೀಡಿದ್ದು, ಹಂತ ಹಂತವಾಗಿ ಆ ವ್ಯವಸ್ಥೆ ರಾಜ್ಯದ ಎಲ್ಲಡೆ ಜಾರಿಯಾಗುತ್ತಿದೆ.

ಕೆಳ ಹಂತದ ಕಚೇರಿಗಳಲ್ಲಿ ಹಂತ ಹಂತವಾಗಿ ಕಡತ ಪರಿಶೀಲನೆ ನಡೆಸುವುದು ಹಾಗೂ ಅವುಗಳನ್ನು ಆನ್‌ಲೈನ್ ವ್ಯವಸ್ಥೆಗೆ ತರುವ ಕೆಲಸ ನಡೆಯುತ್ತಿದೆ. ವಿವಿಧ ಇಲಾಖೆಯವರು ಪ್ರತ್ಯೇಕ ವೆಬ್‌ಪೋರ್ಟಲ್ ತೆರೆದಿದ್ದು, ತಹಶೀಲ್ದಾರ್ ಕಚೇರಿ ಹಾಗೂ ನಾಡ ಕಚೇರಿಯ ಕಡತಗಳು ಆನ್‌ಲೈನ್ ಆಗಿದೆ. ಅದರ ಮುಂದುವರೆದ ಭಾಗವಾಗಿ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಮೇ 26ರಿಂದ ಸಂಪೂರ್ಣ ಇ-ಆಫೀಸ್ ವ್ಯವಸ್ಥೆ ಜಾರಿ ಮಾಡುವಂತೆ ಸರ್ಕಾರ ಸೂಚನೆ ಹೊರಡಿಸಿದೆ. ಸದ್ಯ ಉತ್ತರ ಕನ್ನಡ ಜಿಲ್ಲೆಯ 229 ಗ್ರಾಪಂಗಳ ಪೈಕಿ 125 ಗ್ರಾಪಂಗಳಲ್ಲಿ ಈ ಆಫೀಸ್ ವ್ಯವಸ್ಥೆ ಜಾರಿಗೆ ಬಂದಿದೆ. 19 ಕಡತಗಳನ್ನು ಈಗಾಗಲೇ ಇ-ಆಫೀಸ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ.