Loading...
  • aksharakrantinagarajnaik@gmail.com
  • +91 8073197439
Total Visitors: 2385
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-19

ಶಾಲೆಯಲ್ಲಿ ಕಳ್ಳತನ: ಮಾದರಿ ಶಾಲೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಕದ್ದ ಬಾಲಕ

News Details

ಮುಂಡಗೋಡಿನ ಶಾಸಕರ ಮಾದರಿ ಶಾಲೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಕಳ್ಳತನವಾಗಿದೆ. ಶಾಲಾ ಬಾಲಕನೊಬ್ಬ ಅದನ್ನು ಕದ್ದಿರುವುದಾಗಿಯೂ ಗೊತ್ತಾಗಿದೆ!

ಮುಂಡಗೋಡು ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಶಾಲೆಗೆ ಒಟ್ಟು 8 ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಅದರಲ್ಲಿ ಎರಡು ಸಿಸಿ ಕ್ಯಾಮರಾ ಶನಿವಾರ ಕಾಣೆಯಾಗಿದ್ದವು. ಕಳೆದ ಎರಡು ತಿಂಗಳ ಹಿಂದೆ ಅಳವಡಿಸಿದ್ದ ಕ್ಯಾಮರಾ ಕಾಣದ ಕಾರಣ ಹುಡುಕಾಟ ಶುರುವಾಯಿತು. ಬಾಲಕನೊಬ್ಬ ಕ್ಯಾಮರಾ ಕದ್ದಿರುವುದು ಇನ್ನೊಂದು ಸಿಸಿ ಕ್ಯಾಮರಾದೊಳಗೆ ಸೆರೆಯಾಗಿತ್ತು!

ಎರಡು ಕ್ಯಾಮರಾ ಕದ್ದ ನಂತರ ಹೆದರಿದ ಆ ಬಾಲಕ ಆ ಪೈಕಿ ಒಂದು ಕ್ಯಾಮರಾವನ್ನು ಶಾಲಾ ಆವರಣದಲ್ಲಿರಿಸಿರುವುದು ಗಮನಕ್ಕೆ ಬಂದಿತು. ಕಚೇರಿ ಪಕ್ಕದಲ್ಲಿರುವ ಕ್ಯಾಮರಾವನ್ನು ಆತ ಕೊಂಡೊಯ್ದಿದ್ದು, ಕ್ಯಾಮರಾ ಕಳ್ಳತನಕ್ಕೆ ಕಾರಣ ಮಾತ್ರ ಗೊತ್ತಾಗಲಿಲ್ಲ. ಕ್ಯಾಮರಾ ಕಳ್ಳತನದ ಬಗ್ಗೆ ಶಾಲಾ ಮುಖ್ಯೋದ್ಯಾಪಕ ವಿನೋದ ನಾಯಕ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಈ ಶಾಲೆಯ ಬಾಗಿಲು ಮುರಿದು ಕಳ್ಳತನ ನಡೆದಿತ್ತು. ಶಾಲೆಯಲ್ಲಿದ್ದ ಪುಸ್ತಕ ಹಾಗೂ ಹಾಜರಾತಿ ಪುಸ್ತಕವನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಅಪರಾಧ ತಡೆಗೆ ಸಿಸಿ ಕ್ಯಾಮರಾ ಅಳವಡಿಸಿದ್ದು, ಇದೀಗ ಕ್ಯಾಮರಾವೇ ಕಳ್ಳತನವಾಗಿದ್ದರ ಬಗ್ಗೆ ಚರ್ಚೆ ನಡೆದಿದೆ. ಇನ್ನೂ, ಶಾಲಾ ಆವರಣದೊಳಗೆ ಕೆಲವರು ಪದೇ ಪದೇ ಆಗಮಿಸಿ ವಿದ್ವಂಸಕ ಕೃತ್ಯ ನಡೆಸುವ ಬಗ್ಗೆಯೂ ಆರೋಪಗಳಿವೆ.