Loading...
  • aksharakrantinagarajnaik@gmail.com
  • +91 8073197439
Total Visitors: 2387
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-19

ಶಿರಸಿಯಲ್ಲಿ ಒಂದೂವರೆ ತಿಂಗಳಿಂದ ತಹಶೀಲ್ದಾರ್ ಇಲ್ಲ

News Details

ಶಿರಸಿಯಲ್ಲಿ ಕಳೆದ ಒಂದುವರೆ ತಿಂಗಳಿನಿoದ ಖಾಯಂ ತಹಶೀಲ್ದಾರ್ ಇಲ್ಲ. ಹೀಗಾಗಿ ತಾಲೂಕಾ ದಂಡಾಧಿಕಾರಿಯಾಗಿ ತಹಶೀಲ್ದಾರ್ ಮಾಡಬೇಕಾದ ಕೆಲಸಗಳೆಲ್ಲವೂ ಬಾಕಿ ಉಳಿದಿದೆ.

ಈ ಹಿಂದೆ ಶ್ರೀಧರ ಮುಂದಲಮನಿ ಅವರು ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ವರ್ಗಾವಣೆ ನಂತರ ದಾಂಡೇಲಿ ತಹಶೀಲ್ದಾರ್ ಅವರಿಗೆ ಪ್ರಭಾರ ಅಧಿಕಾರ ನೀಡಲಾಯಿತು. ಅದೂ ಮುಗಿದ ಮೇಲೆ ಮುಂಡಗೋಡು ತಹಶೀಲ್ದಾರರಿಗೆ ಹೆಚ್ಚುವರಿ ಹೊಣೆವಹಿಸಲಾಯಿತು. ಅದಾಗಿ ಬಹುದಿನ ಕಳೆದರೂ ಶಿರಸಿಗೆ ಖಾಯಂ ತಹಶೀಲ್ದಾರ್ ನೇಮಕಾತಿಗೆ ಸರ್ಕಾರ ಆಸಕ್ತಿವಹಿಸಿಲ್ಲ.

ಈಗಾಗಲೇ ಒಂದು ತಾಲೂಕು ದಂಡಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ತಹಶೀಲ್ದಾರರಿಗೆ ಇನ್ನೊಂದು ತಾಲೂಕಿನ ಜವಾಬ್ದಾರಿಯನ್ನು ಪ್ರಭಾರಿಯಾಗಿ ನೀಡಿರುವುದರಿಂದ ಕೆಲಸದ ಒತ್ತಡ ಹೆಚ್ಚಾಗಿದೆ. ಜೊತೆಗೆ ಸಾರ್ವಜನಿಕ ಕೆಲಸ ಸಹ ಸಕಾಲದಲ್ಲಿ ಆಗುತ್ತಿಲ್ಲ. ಭೂ ಕಂದಾಯ, ಕೃಷಿ-ಕೃಷಿ ಮಾರುಕಟ್ಟೆ, ನೀರಾವರಿ, ಭೂ ವ್ಯಾಜ್ಯ, ಪಿಂಚಣಿ ಸೇರಿ 14 ಪ್ರಮುಖ ಜವಾಬ್ದಾರಿಗಳು ತಹಶೀಲ್ದಾರರ ಮೇಲಿವೆ. ಸ್ಥಳೀಯ ಆಡಳಿತದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದು ತಹಶೀಲ್ದಾರರ ಮುಖ್ಯ ಕೆಲಸವಾಗಿದೆ. ಹೀಗಿರುವಾಗ ಶಿರಸಿ ಕಚೇರಿಗೆ ತಹಶೀಲ್ದಾರ್ ಇಲ್ಲದಿರುವ ಕಾರಣ ಜನ ಸಾಮಾನ್ಯರ ಅರ್ಜಿಗಳು ಹಾಗೇ ಉಳಿದಿದೆ. ನಿತ್ಯದ ಕಚೇರಿ ಕೆಲಸಗಳು ಸಾಕಷ್ಟು ಪ್ರಮಾಣದಲ್ಲಿ ಬಾಕಿಯಾಗಿವೆ.

ಜಾಗ ಅತಿಕ್ರಮಣ, ನೌಕರರ ಮೇಲಿನ ದೂರು ಸೇರಿ ಹಲವು ವಿವಾದಗಳನ್ನು ಬಗೆಹರಿಸಲು ಸರ್ಕಾರ ತಹಶೀಲ್ದಾರರಿಗೆ ಅಧಿಕಾರ ನೀಡಿದೆ. ಚುನಾವಣೆ ವೇಳೆ ಸಹಾಯಕ ಚುನಾವಣಾ ಅಧಿಕಾರಿಯಾಗಿಯೂ ತಹಶೀಲ್ದಾರ್ ಕೆಲಸ ಮಾಡುತ್ತಾರೆ. ಗ್ರಾಮ ಆಡಳಿತಾಧಿಕಾರಿಗಳಿಂದ ಹಿಡಿದು ತಾಲೂಕಾ ಮಟ್ಟದ ಪ್ರತಿಯೊಬ್ಬ ಸರ್ಕಾರಿ ಸಿಬ್ಬಂದಿ ಮೇಲೆ ನಿಯಂತ್ರಣ ಸಾಧಿಸುವುದು ತಹಶೀಲ್ದಾರ್ ಅವರ ಹೊಣೆ. ಆದರೆ, ಶಿರಸಿ ಮಟ್ಟಿಗೆ ಈ ಯಾವ ಕೆಲಸವೂ ಸರಿಯಾಗಿ ಆಗುತ್ತಿಲ್ಲ.

ಸದ್ಯ ಮಳೆಗಾಲ ಸಮೀಪಿಸುತ್ತಿದ್ದು, ಶಿರಸಿಯಲ್ಲಿ ತಹಶೀಲ್ದಾರ್ ಸೂಚನೆ ಮೇರೆಗೆ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಗ್ರಾಮೀಣ ಪ್ರದೇಶದ ಜನ ನಿತ್ಯ ಸಮಸ್ಯೆ ಹೇಳಿಕೊಂಡು ನಗರಕ್ಕೆ ಬರುತ್ತಿದ್ದಾರೆ. ಆದರೆ, ಅವರ ಸಮಸ್ಯೆಗಳನ್ನು ಪರಿಹರಿಸುವ ಭರವಸೆಗಳು ಸಿಗುತ್ತಿಲ್ಲ. ಈ ಎಲ್ಲಾ ವಿಷಯ ಅರಿತ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಇದೀಗ ಖಾಯಂ ತಹಶೀಲ್ದಾರರ ನೇಮಕಕ್ಕಾಗಿ ಪಟ್ಟು ಹಿಡಿದಿದ್ದಾರೆ. ಮೇ 19ರ ಸೋಮವಾರ ಬೆಳಿಗ್ಗೆ 11 ಗಂಟಗೆ ಶಿರಸಿಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಅವರು ಸರ್ಕಾರಕ್ಕೆ ಪತ್ರ ನೀಡಲಿದ್ದು, ಆ ಮೂಲಕ ತಹಶೀಲ್ದಾರ್ ನೇಮಕಕ್ಕೆ ಒತ್ತಾಯಿಸಲಿದ್ದಾರೆ.