Loading...
  • aksharakrantinagarajnaik@gmail.com
  • +91 8073197439
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
21:31:00 2025-04-03

ವೀರ ಯೋಧ ವಿನಯಕುಮಾರ ನಾಯ್ಕ ನಿವೃತ್ತಿ. ತಾಲೂಕಿನ ಜನತೆಯಿಂದ ಅಭೂತಪೂರ್ವ ಸ್ವಾಗತ

News Details

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಮುಗದೂರು ಸಂಪೇಕೇರಿಯ ವಿನಯಕುಮಾರ ನಾಯ್ಕ ಅವರಿಗೆ ತಾಲೂಕಿನ‌ ಜನತೆ ಹಾಗೂ ಸ್ಥಳೀಯರು ಅಭೂತಪೂರ್ವ ಸ್ವಾಗತ ನೀಡಿದರು.
2008 ರಲ್ಲಿ ಭಾರತೀಯ ಸೈನ್ಯಕ್ಕೆ ಸೇರಿದ ವಿನಯಕುಮಾರ ನಾಯ್ಕರವರು ಲಡಾಕ್, ಶ್ರೀನಗರ, ಪಂಜಾಬ್ ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾಗಿ ಗುರುವಾರ ಹುಟ್ಟೂರಿಗೆ ಮರಳಿದ್ದಾರೆ.
ಸುಧೀರ್ಘ 17 ವರ್ಷ ಸೇವೆ ಸಲ್ಲಿಸಿ ಶಿರಸಿ ಮಾರ್ಗದ ಮೂಲಕ ಸಿದ್ದಾಪುರಕ್ಕೆ ಆಗಮಿಸಿದ ವಿನಯಕುಮಾರ ನಾಯ್ಕ ರವರನ್ನು ಪಟ್ಟಣದ ಗಂಗಾಬಿಕಾ ದೇವಸ್ಥಾನದ ಬಳಿ ಬರಮಾಡಿಕೊಂಡು ಅದ್ಧೂರಿ ಸ್ವಾಗತ ನೀಡಲಾಯಿತು. ಅಲ್ಲಿಂದ ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಗಾರ್ಡನ್ ಸರ್ಕಲ್ ಬಳಿ ಸಭೆ ನಡೆಸಲಾಯಿತು.
ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕುಮಾರ ಗೌಡರ್ ಹಾರ ಹಾಕಿ ಸ್ವಾಗತಿಸಿದರು. ಹದಿನೇಳು ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿ ತಾಯ್ನಾಡಿನ ಸೇವೆ ಸಲ್ಲಿಸಿದ ವಿನಯಕುಮಾರ ನಾಯ್ಕ ನಿಜಕ್ಕೂ ಅಭಿನಂದನಾರ್ಹರು. ದೇಶದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಿಂದ ಜೀವನ ಸಾಗಿಸಲು ಕಾರಣರಾದ ಸೈನಿಕರು ಹಾಗೂ ರೈತರನ್ನು ಎಲ್ಲರೂ ಗೌರವದಿಂದ ಕಾಣಬೇಕು. ವಿನಯಕುಮಾರ ಮುಂದಿನ ಜೀವನ ಸುಖ, ಶಾಂತಿಯಿಂದ ಕೂಡಿರಲಿ ಎಂದು ಮೂವರು ಶುಭ ಹಾರೈಸಿದರು.
ಗಾರ್ಡನ್ ಸರ್ಕಲ್ಲಿನಿಂದ ಹೊರಟ ಮೆರವಣಿಗೆ ರಾಜಮಾರ್ಗ, ಸೊರಬಾ ರಸ್ತೆ, ಹಾಳದಕಟ್ಟಾ ಮಾರ್ಗವಾಗಿ ಮುಗದೂರು ಶಾಲೆಗೆ ತೆರಳಿ ವಿನಯಕುಮಾರ ಪ್ರಾಥಮಿಕ ಶಿಕ್ಷಣ ಪಡೆದ ಶಾಲೆಯಲ್ಲಿ ಅಭಿನಂದಿಸಲಾಯಿತು. ನಂತರ ಹುಟ್ಟೂರಾದ ಸಂಪೇಕೇರಿಯಲ್ಲಿ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಮೆರವಣಿಗೆಯುದ್ದಕ್ಕೂ ಸ್ಥಳೀಯರು, ಯುವಕರು ಹಾಗೂ ದೇಶಾಭಿಮಾನಿಗಳು ಬೈಕ್ ರ್ಯಾಲಿ ನಡೆಸಿ ವೀರ ಯೋಧನ ಸೇವೆಗೆ ಗೌರವ ಸಲ್ಲಿಸಿದರು.