Loading...
  • aksharakrantinagarajnaik@gmail.com
  • +91 8073197439
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
18:47:00 2025-04-03

ಅಂಕೋಲಾದ ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಕೋಟಿ ರೂ ಹಣ ಸಿಕ್ಕಿದ ಪ್ರಕರಣದ ಆರೋಪಿಗಳಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.

News Details

ಅಂಕೋಲಾದ ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಕೋಟಿ ರೂ ಹಣ ಸಿಕ್ಕಿದ ಪ್ರಕರಣದ ಆರೋಪಿಗಳಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.

ಜನವರಿ 28ರಂದು ಹುಬ್ಬಳ್ಳಿ ಅಂಕೋಲಾ ಹೆದ್ದಾರಿ ಅಂಚಿನ ರಾಮನಗುಳಿ ಬಳಿ ಐಷಾರಾಮಿ ಕಾರೊಂದು ಅನಾಥವಾಗಿ ಬಿದ್ದಿತ್ತು. ಕಾರಿನ ಗ್ಲಾಸುಗಳು ಒಡೆದಿದ್ದರಿಂದ ಅನೇಕರು ಕಾರು ಅಪಘಾತವಾಗಿದೆ ಎಂದು ಭಾವಿಸಿದ್ದರು. ಪೊಲೀಸರು ಬಂದು ಪರಿಶೀಲಿಸಿದ್ದರು. ಆಗ, ಕಾರಿನ ಒಳಗೆ 1.14 ಲಕ್ಷ ರೂ ಹಣ ಪತ್ತೆಯಾಗಿದ್ದು, ಆ ಹಣದ ಜೊತೆ ಕಾರನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದರು.

ಪ್ರಕರಣದ ವಿಚಾರಣೆ ನಡೆಸಿದಾಗ ಮಂಗಳೂರು ಮೂಲದ ತಲ್ಲತ್ತ ಮತ್ತು ನವಫಾಲ ಆರೋಪಿತರು ಸಿಕ್ಕಿ ಬಿದ್ದಿದ್ದರು. ಮುಂಬೈಯಲ್ಲಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದರು. ತನಿಖೆ ನಡೆಸಿದಾಗ ಕೋಟಿ ಹಣವಿರುವ ಕಾರನ್ನು ಕಳ್ಳರು ದರೋಡೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಆರೋಪಿತರನ್ನು ಗುರುವಾರ ಅಂಕೋಲಾ ಕಡೆ ಕರೆದೊಯ್ಯುತ್ತಿರುವಾಗ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದರು. ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿ ದಾಳಿ ಮಾಡಿದರು.

ಈ ಗುಂಡಿನ ಜಟಾಪಟಿಯಲ್ಲಿ ನಾಲ್ವರು ಪೊಲೀಸರಿಗೆ ಸಹ ಗಾಯವಾಗಿದೆ. ಪೊಲೀಸರ ಕಾಲು ಹಾಗೂ ತಲೆಗೆ ಪೆಟ್ಟಾಗಿದೆ. ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅಲ್ಲಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ.