
ಕುಮಟಾದಲ್ಲಿ ಅನೇಕರು ಸೇರಿ ಕೋಳಿ ಅಂಕ ನಡೆಸುತ್ತಿರುವಾಗ ಪಿಎಸ್‌ಐ ರವಿ ಗುಡ್ಡಿ ದಾಳಿ ಮಾಡಿದ್ದಾರೆ. ಒಂದು ಕೋಳಿ ಜೊತೆ ನಾಲ್ವರು ಜೂಜುಕೋರರು ಸಿಕ್ಕಿ ಬಿದ್ದಿದ್ದಾರೆ.
News Details
ಕುಮಟಾದಲ್ಲಿ ಅನೇಕರು ಸೇರಿ ಕೋಳಿ ಅಂಕ ನಡೆಸುತ್ತಿರುವಾಗ ಪಿಎಸ್‌ಐ ರವಿ ಗುಡ್ಡಿ ದಾಳಿ ಮಾಡಿದ್ದಾರೆ. ಒಂದು ಕೋಳಿ ಜೊತೆ ನಾಲ್ವರು ಜೂಜುಕೋರರು ಸಿಕ್ಕಿ ಬಿದ್ದಿದ್ದಾರೆ.
ಕುಮಟಾ ಕಮಾನಿ ಗ್ರಾಮದ ಮುಸ್ಲೀಂಕೇರಿಗೆ ಹೋಗುವ ರಸ್ತೆ ಪಕ್ಕ 10ಕ್ಕೂ ಅಧಿಕ ಜನ ಸೇರಿ ಕೋಳಿ ಅಂಕ ಆಡಿಸುತ್ತಿದ್ದರು. ಏಪ್ರಿಲ್ 1ರ ರಾತ್ರಿ ಎರಡು ಹುಂಜಗಳ ಮೇಲೆ ಹಣ ಕಟ್ಟಿ ಅವುಗಳನ್ನು ಕಚ್ಚಾಟಕ್ಕೆ ಬಿಟ್ಟಿದ್ದರು.
ಬೀದಿ ದೀಪದ ಬೆಳಕಿನಲ್ಲಿ ನಡೆಯುವ ಆಟ ನೋಡಲು ಅನೇಕರು ಸೇರಿದ್ದರು. ಆದರೆ, ಪೊಲೀಸರನ್ನು ಕಂಡ ತಕ್ಷಣ ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಅದಾಗಿಯೂ, ಪೊಲೀಸರು ಹೊಟೇಲ್ ಕೆಲಸ ಮಾಡುವ ಮಾಸೂರಿನ ವಿಶ್ವನಾಥ ನಾಯ್ಕ, ಮೀನುಗಾರಿಕೆ ನಡೆಸುವ ಕಲಭಾವಿಯ ಆನಂದ ಅಂಬಿಗ, ಅಳ್ವೆಕೊಡಿಯ ರಿಕ್ಷಾ ಚಾಲಕ ಗಜಾನನ ಅಂಬಿಗ ಹಾಗೂ ಹಿರೆಗುತ್ತಿ ತಗತಗೇರಿಯಲ್ಲಿ ಕೂಲಿ ಕೆಲಸದ ಜೋಗೇಶ ಗುನಗಾ ಅವರನ್ನು ಹಿಡಿದರು.
ಅವರ ಬಳಿಯಿದ್ದ ಒಂದು ಹುಂಜವನ್ನು ವಶಕ್ಕೆ ಪಡೆದರು. 560ರೂ ಹಣದೊಂದಿಗೆ ಕತ್ತಿ, ಚೀಲವನ್ನು ಜಪ್ತು ಮಾಡಿದರು. ಗೋಕರ್ಣ ಎನ್ನೆಮುಡಿಯ ಪ್ರಜ್ವಲ ಹಳ್ಳೇರ, ಅದೇ ಊರಿನ ಯೋಗೇಶ ಹಳ್ಳರ್, ಕೋಡ್ಕಣಿಯ ಪ್ಲೋಟಿನಕೇರಿಯ ನಾಗರಾಜ ನಾಯ್ಕ, ಹಾಗೂ ದತ್ತಾತ್ರೇಯ ಅಂಬಿಗ ಸೇರಿ ಇನ್ನೂ ಕೆಲವರು ಓಡಿಹೋದ ಬಗ್ಗೆ ಪ್ರಕರಣ ದಾಖಲಿಸಿದರು.