ಮುಂಡಗೋಡದ ಸಿದ್ದು ಯಾಮಕರ ಎಂಬಾತರ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ಜೊತೆ ಸೆಣಸಾಟ ನಡೆಸಿ ಜೀವ ಉಳಿಸಿಕೊಂಡ ಸಿದ್ದು ಅವರನ್ನು ಊರಿನವರು ಆಸ್ಪತ್ರೆಗೆ ದಾಖಲಿಸಿದರು.
News Details
ಮುಂಡಗೋಡದ ಸಿದ್ದು ಯಾಮಕರ ಎಂಬಾತರ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ಜೊತೆ ಸೆಣಸಾಟ ನಡೆಸಿ ಜೀವ ಉಳಿಸಿಕೊಂಡ ಸಿದ್ದು ಅವರನ್ನು ಊರಿನವರು ಆಸ್ಪತ್ರೆಗೆ ದಾಖಲಿಸಿದರು.
ಮುಂಡಗೋಡದ ಜೋಗೇಶ್ವರ ಹಳ್ಳದ ಬಳಿ ಕರಡಿ ಸಂಚಾರ ಜೋರಾಗಿದೆ. ಗುರುವಾರ ಆ ಕಡೆ ನಡೆದುಹೋಗುತ್ತಿದ್ದ ಸಿದ್ದು ಯಾಮಕರ್ ಮೇಲೆ ಕರಡಿ ಆಕ್ರಮಣ ನಡೆಸಿದೆ. ಹೊಲಕ್ಕೆ ನೀರುಣಿಸುವುದಕ್ಕಾಗಿ ಸಿದ್ದು ಯಾಮಕರ್ ಹೊರಟಿದ್ದರು. ಬೋರ್‌ವೆಲ್ ಚಾಲು ಮಾಡುವ ವೇಳೆ ಕರಡಿ ದಾಳಿ ನಡೆಸಿತು.
ಕರಡಿ ಕಚ್ಚಿದಾಗ ಸಿದ್ದು ಯಾಮಕರ್ ಜೋರಾಗಿ ಕೂಗಿದರು. ಅವರ ಕೂಗು ಯಾರಿಗೂ ಕೇಳಲಿಲ್ಲ. ಹೀಗಾಗಿ ಕರಡಿ ಓಡಿಸಲು ಸಾಧ್ಯವಾಗಲಿಲ್ಲ. ಅದಾದ ನಂತರ ನಿರಂತರವಾಗಿ ಅವರು ಬೊಬ್ಬೆ ಹೊಡೆದಿದ್ದು, ಕರಡಿ ಜೊತೆ ಸೆಣೆಸಾಟ ನಡೆಸಿದರು. ಆಗ, ಊರಿನವರು ಅಲ್ಲಿಗೆ ಬಂದು ಸಿದ್ದು ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದರು.
ಅಸ್ವಸ್ಥಗೊಂಡಿದ್ದ ಸಿದ್ದು ಯಮಕರ್ ಅವರನ್ನು ಜನರು ಆಸ್ಪತ್ರೆಗೆ ದಾಖಲಿಸಿದರು. ಸಿದ್ದು ಯಾಮಕರ್ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.