
ಅಂಕೋಲಾ ಕನ್ನಡ ಸಂಘದ ಪುನರ್ ರಚನೆ ಗೌರವಾಧ್ಯಕ್ಷರಾಗಿ ನ್ಯಾಯವಾದಿ ನ್ವಿ.ಎಸ್. ನಾಯಕ - ಸಂಚಾಲಕರಾಗಿ ಹೊನ್ನಪ್ಪ ನಾಯಕ್ ಅವರ್ಸಾ ಪುನರ್ ನಿಯುಕ್ತಿ ನೂತನ ಅಧ್ಯಕ್ಷರಾಗಿ ಎನ್. ಬಿ. ನಾಯಕ ಸೂರ್ವೆ - ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ ಕೇಣಿ
News Details
ಅಂಕೋಲಾ : ಕುಮಟಾ ಕನ್ನಡ ಸಂಘದ ಆಶ್ರಯದಲ್ಲಿನ ಅಂಕೋಲಾ ಕನ್ನಡ ಸಂಘವನ್ನು ಪುನರ್ ರಚಿಸಲಾಗಿದೆ. ಅಂಕೋಲಾ ಕನ್ನಡ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಖ್ಯಾತ ಹಿರಿಯ ನ್ಯಾಯವಾದಿಗಳಾದ ವಿ.ಎಸ್. ನಾಯಕ ಕಣಗಿಲ್ ರವರನ್ನು ಗೌರವಾಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿ, ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಯುವ ಧುರೀಣ ಹೊನ್ನಪ್ಪ ವಿಠೋಬ ನಾಯಕ ಅವರ್ಸಾರವರನ್ನು ಸಂಚಾಲಕರನ್ನಾಗಿ ಮುಂದುವರಿಸಲಾಗಿದೆ. ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಅಧ್ಯಕ್ಷರಾಗಿ ವಿಶ್ರಾಂತ ಪದೋನ್ನತ ಮುಖ್ಯಾಧ್ಯಾಪಕರಾದ "ಸಮರ್ಪಣಾ" ವಿಶ್ರಾಂತ ಶಿಕ್ಷಕರ ಬಳಗದ ಸಂಸ್ಥಾಪಕ ನಿಕಟಪೂರ್ವ ಅಧ್ಯಕ್ಷರಾದ ಹಾಗೂ ಪ್ರೇಮತಾಯಿ ಪಿಕಳೆ ಶಿಷ್ಯ ವೃಂದದ ಅಧ್ಯಕ್ಷರಾಗಿದ್ದ ಎನ್. ಬಿ.ನಾಯಕ್ ಸೂರ್ವೆ, ಉಪಾಧ್ಯಕ್ಷರಾಗಿ ಅಂಕೋಲಾ ಅರ್ಬನ್ ಬ್ಯಾಂಕಿನ ಸದಸ್ಯರಾದ ಉದಯ ವಾಮನ ನಾಯಕ, ಪ್ರಧಾನ ಕಾರ್ಯದರ್ಶಿಗಳಾಗಿ ಅಗಸೂರಿನ ಕರ್ನಾಟಕ ಪಬ್ಲಿಕ್ ಸ್ಕೂಲಿನ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸವ್ಯಸಾಚಿ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಂದ್ರ ಪ್ರಕಾಶ ಕೇಣಿ, ಸಹ ಕಾರ್ಯದರ್ಶಿಗಳಾಗಿ ನಿವೃತ್ತ ಶಿಕ್ಷಕರಾದ ಗೋಪಾಲ ರಾಮಚಂದ್ರ ನಾಯಕ ಬಾಸಗೋಡ, ಖಜಾಂಚಿಯಾಗಿ ಧುರೀಣ ಗೋಪಾಲಕೃಷ್ಣ ನಾಯಕ ಶೀಳ್ಯ, ಸದಸ್ಯರಾಗಿ ಕೆ. ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ಕ್ರಿಯಾಶೀಲ ಪ್ರಾಧ್ಯಪಕಿ ಪುಷ್ಪಾ ನಾಯ್ಕ.ನಾಗೇಶ ನಾಯಕ ಬಾವಿಕೇರಿ ಹಾಗೂ ನಮೃತಾ ನಾಯಕರವರನ್ನು ಆಯ್ಕೆ ಮಾಡಲಾಗಿದೆ ಎಂದು ಕುಮಟಾ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ವಿಜಯಶಾಲಿ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಸದಾನಂದ ದೇಶಭಂಡಾರಿಯವರು ತಿಳಿಸಿದ್ದಾರೆ.