Loading...
  • aksharakrantinagarajnaik@gmail.com
  • +91 8073197439
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
10:54:00 2025-03-28

ಅಸಹಾಯಕ, ಅನಾಥ ಸ್ಥಿತಿಯಲ್ಲಿ ಅನಾರೋಗ್ಯ ಪೀಡಿತನಾಗಿ ನಡೆದಾಡುವದಕ್ಕೆ ಆಗದ ಸ್ಥಿತಿಯಲ್ಲಿದ್ದ ಕುಮಟಾ ಪಟ್ಟಣದ ಪಾಂಡುರಂಗ ಬೀರಪ್ಪ ನಾಯ್ಕ ಎನ್ನುವ ವ್ರದ್ಧ ವ್ಯಕ್ತಿ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ .

News Details

ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆಯಲ್ಲಿ ಅಸಹಾಯಕ, ಅನಾಥ ಸ್ಥಿತಿಯಲ್ಲಿ ಅನಾರೋಗ್ಯ ಪೀಡಿತನಾಗಿ ನಡೆದಾಡುವದಕ್ಕೆ ಆಗದ ಸ್ಥಿತಿಯಲ್ಲಿದ್ದ ಕುಮಟಾ ಪಟ್ಟಣದ ಪಾಂಡುರಂಗ ಬೀರಪ್ಪ ನಾಯ್ಕ ಎನ್ನುವ ವ್ರದ್ಧ ವ್ಯಕ್ತಿಯನ್ನು ಪೋಲಿಸರ ಸಹಕಾರದೊಂದಿಗೆ ರಕ್ಷಿಸಿ ರಾತ್ರಿ 10 : 30 ಕ್ಕೆ ಶಿರಸಿಯಿಂದ ಸಿದ್ದಾಪುರದ ಮುಗದೂರಿನಲ್ಲಿ ತಾವು ನಡೆಸುತ್ತಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದ ನಾಗರಾಜ ನಾಯ್ಕ. ದಿನಾಂಕ 27-03-2025 ರಂದು ಸಾಯಂಕಾಲ ಶಿರಸಿ ಪಂಡಿತ ಜನರಲ್ ಆಸ್ಪತ್ರೆಯ ಆವರಣದಲ್ಲಿ ಅನಾಥ ಸ್ಥಿತಿಯಲ್ಲಿ ವಯೋವೃದ್ಧರೊಬ್ಬರು ಇರುವ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪೋನ್ ಮಾಡಿ ಎಮ್.ಎಲ್.ಸಿ ಮಾಡಿರುವ ಬಗ್ಗೆ ಪಿ.ಆರ್.ಎಸ್ ದಿಂದ ಮಾಹಿತಿ ಬಂದಂತೆ ಶಿರಸಿ ನಗರ ಠಾಣೆಯ ಪೋಲಿಸರು ಹೋಗಿ ವಿಚಾರಿಸಲಾಗಿ ಈ ವಯೋವೃದ್ಧನು ತನ್ನ ಹೆಸರು ಪಾಂಡುರಂಗ ಬೀರಪ್ಪ ನಾಯ್ಕ ಸಾ|| ಅರ್ಬನ್ ಬ್ಯಾಂಕ್ ಹತ್ತಿರ ಕುಮಟಾ ಅಂತಾ ಹೇಳಿಕೊಂಡಿದ್ದು ಬೇರೆ ಯಾವುದೇ ಮಾಹಿತಿ ನೀಡಿರುವದಿಲ್ಲಾ. ಆತನ ಸಂಬಂಧಿಕರು ಸಿಗುವವರೆಗೆ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ಮುಂದಿನ ಪಾಲನೆ ಪೋಷಣೆಗಾಗಿ ಸಿದ್ದಾಪುರದ ಮುಗದೂರಿನಲ್ಲಿ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ನಡೆಸುತ್ತಿರುವ ನಾಗರಾಜ ನಾಯ್ಕರಿಗೆ ಪೋಲಿಸರು ಕರೆಮಾಡಿ ಈತನನ್ನು ಆಶ್ರಮಕ್ಕೆ ಸೇರಿಸಿಕೊಳ್ಳುವಂತೆ ವಿನಂತಿ ಮಾಡಿದ್ದರು. ತಕ್ಷಣ ರಾತ್ರಿ 10:30ಕ್ಕೆ ನಾಗರಾಜ ನಾಯ್ಕರವರು ಶಿರಸಿಗೆ ಬಂದು ಪೋಲಿಸರ ಸಹಕಾರದೊಂದಿಗೆ ಈ ವ್ರದ್ದನನ್ನು ಆಶ್ರಮಕ್ಕೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ನಾಗರಾಜ ನಾಯ್ಕರವರು ಮಾಹಿತಿ ನೀಡಿದ್ದು ಈ ವ್ರದ್ಧನನ್ನು ವಿಚಾರಿಸಲಾಗಿ ತನ್ನ ಹೆಸರು ಪಾಂಡುರಂಗ ಬೀರಪ್ಪ ನಾಯ್ಕ, ಕುಮಟಾ ಪಟ್ಟಣದ ಅರ್ಬನ್ ಬ್ಯಾಂಕ್ ಹಿಂದುಗಡೆ ತನ್ನ ಮನೆ ಇದೆ, ತನ್ನ ಮದುವೆ ಆಗಿರುವುದಿಲ್ಲಾ, ಮನೆಯಲ್ಲಿ ತನ್ನ ತಂಗಿ ಇದ್ದಾಳೆ ಹಾಗೂ ಬೆಂಗಳೂರಿನಲ್ಲಿ ತನ್ನ ಅಣ್ಣ ಎಂ ಎನ್ ನಾಯ್ಕ ಹಾಗೂ ಆತನ ಮಕ್ಕಳು ಇದ್ದಾರೆ, ತನಗೆ ಬಹಳಷ್ಟು ಜನ ಸಂಬಂಧಿಕರು ಇದ್ದಾರೆ ಎಂದು ಹೇಳುತ್ತಿದ್ದಾನೆ. ಅನಾರೋಗ್ಯ ಪೀಡಿತರಾಗಿ ನಡೆದಾಡಲು ಆಗದ ಸ್ಥಿತಿಯಲ್ಲಿ ಈ ಅಜ್ಜ ಇದ್ದು ಈತನ ಸಂಬಂಧಿಕರು, ಸ್ನೇಹಿತರು, ಪರಿಚಯದವರು ಇದ್ದರೆ 8073197439, 9481389187 ನಮ್ಮ ನಂಬರಿಗೆ ಅಥವಾ ಶಿರಸಿ ನಗರ ಪೋಲಿಸ್ ಠಾಣೆಗೆ ಸಂಪರ್ಕಿಸ ಬೇಕೆಂದು ಆಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ವಿನಂತಿಸಿಕೊಂಡಿದ್ದಾರೆ. ಹಾಗೂ ಈತನ ರಕ್ಷಣೆಯಲ್ಲಿ ಸಹಕರಿಸಿದ ಎಲ್ಲರಿಗೂ ಹ್ರದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಕಳೆದ 12 ವರ್ಷಗಳಿಂದ ಅನಾಥರ ಸೇವೆ ನಡೆಸುತ್ತಿರುವ ನಾಗರಾಜ ನಾಯ್ಕರು ಹಗಲು - ರಾತ್ರಿ ಎನ್ನದೆ ಅನಾಥರ ರಕ್ಷಣೆ, ಆರೈಕೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಯಾವುದೆ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸೇವೆ ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ಸೊರಬ ಹೊಸನಗರ ಶಿಕಾರಿಪುರ ತಾಲೂಕಿನಿಂದ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ಹೀಗೆ ಹಲವು ಜಿಲ್ಲೆಗಳಿಂದ ರಸ್ತೆ ಮೇಲೆ ಬಸ್ ನಿಲ್ದಾಣಗಳಲ್ಲಿ ಅನಾಥ ಸ್ಥಿತಿಯಲ್ಲಿ ಇರುವವರನ್ನೂ ಪೋಲಿಸರು ಸಾರ್ವಜನಿಕರೂ ಸಂಘ ಸಂಸ್ಥೆಗಳವರ ಸಹಕಾರದಿಂದ ರಕ್ಷಿಸಿ ಅವರನ್ನು ತಮ್ಮ ಅನಾಥಾಶ್ರಮದಲ್ಲಿ ಇಟ್ಟುಕೊಂಡು ತಮ್ಮ ಪತ್ನಿ ಮಮತಾ ನಾಯ್ಕ ಜೊತೆ ಸೇರಿ ಸೇವೆ ಮಾಡುತ್ತಿದ್ದಾರೆ. ನೂರಾರು ಜನರನ್ನು ಅವರ ಕುಟುಂಬದವರಿಗೆ ತಲುಪಿಸಿರುವುದಲ್ಲದೇ, ಅದೇಷ್ಟೋ ಅನಾಥ ವ್ರದ್ಧರು ತೀರಿಕೊಂಡಾಗ ಅವರ ಮಗನ ಸ್ಥಾನದಲ್ಲಿ ನಿಂತು ತಾವೇ ಅಂತ್ಯ ಸಂಸ್ಕಾರ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈಗಲು ಆಶ್ರಮದಲ್ಲಿ 70 ಕ್ಕೂ ಅಧಿಕ ಜನ ಆಶ್ರಯಪಡೆದಿದ್ದಾರೆ. ನಿನ್ನೆ ಕೂಡ ರಾತ್ರಿ 10 : 30 ಘಂಟೆಯ ವೇಳೆಗೆ ಶಿರಸಿಯಿಂದ ಈ ವ್ರದ್ಧನನ್ನು ರಕ್ಷಿಸಿ ಆಶ್ರಮಕ್ಕೆ ಕರೆದುಕೊಂಡು ಹೋಗಿರುವುದು ಇವರ ಸೇವೆಗೆ ಹಿಡಿದ ಕನ್ನಡಿಯಾಗಿದೆ. ಸರಕಾರ, ಅಧಿಕಾರಿಗಳೂ, ಎಂ ಎಲ್ ಎ, ಎಂಪಿಗಳು ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ದಂಪತಿಗಳ ಸೇವೆಯನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸಿ, ಪ್ರೋತ್ಸಾಹಿಸಬೇಕಾಗಿದೆ. ಇಂತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡುವಂತೆ ನಾಗರಾಜ ನಾಯ್ಕ ಕೋರಿಕೊಂಡಿದ್ದಾರೆ. PUNITH RAJKUMAR ASHRAYADHAMA ANATHASHRAMA SEVA SAMITI A/C NO : 40918142470 IFSC CODE : SBIN0040131 BANK NAME : STATE BANK OF INDIA BRANCH : SIDDAPUR UPI ID : 9481389187@ybl PHONE PAY : 9481389187 ಹೆಚ್ಚಿನ ಮಾಹಿತಿಗಾಗಿ ಡಾ. ನಾಗರಾಜ ನಾಯ್ಕ ಮುಖ್ಯಸ್ಥರು ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮ ದೇವಸ್ಥಳ, ಮುಗದೂರು, ಪೊ. ಕೊಂಡ್ಲಿ, ತಾ. ಸಿದ್ದಾಪುರ, (ಉಕ) - 581355 ಮೊ. 9481389187, 8073197439 ಸಂಪರ್ಕಿಸಲು ಕೊರಿಕೊಂಡಿದ್ದಾರೆ.