Loading...
  • aksharakrantinagarajnaik@gmail.com
  • +91 8073197439
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
20:31:00 2025-03-27

ಶಿರಸಿಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ

News Details

ಶಿರಸಿಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುವುದನ್ನು ಮನಗಂಡು ಸರ್ಕಾರ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಸ್ಥಾಪಿಸಿದೆ. ಟ್ರಾಫಿಕ್ ನಿಯಂತ್ರಣದ ಜೊತೆ ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಇಲ್ಲಿಯೂ ಕಠಿಣ ಕ್ರಮ ಜಾರಿಯಾಗಲಿದೆ. ಸಂಚಾರಿ ವ್ಯವಸ್ಥೆಯಲ್ಲಿ ಶಿಸ್ತು ಮೂಡಿಸುವುದಕ್ಕಾಗಿ ಶಿರಸಿಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ತೆರೆಯಲಾಗಿದೆ. ಬಿಳಿ ಬಣ್ಣದ ಬಟ್ಟೆ ಧರಿಸಿದ ಪೊಲೀಸರು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವುದು, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಮದ್ಯ ಸೇವಿಸಿ ವಾಹನ ಚಾಲನೆ ಸೇರಿ ಹಲವು ರೀತಿಯ ಪ್ರಕರಣಗಳನ್ನು ಪತ್ತೆ ಮಾಡುವುದು ಈ ಪೊಲೀಸರ ಮುಖ್ಯ ಗುರಿಯಾಗಿದೆ. ಇನ್ನೂ ಶಾಲಾ-ಕಾಲೇಜು ಬಳಿ ವ್ಯಾಪಕ ಪ್ರಮಾಣದಲ್ಲಿ ಸಂಚಾರ ದಟ್ಟಣೆಯಾಗುತ್ತಿದ್ದು, ಅದರ ನಿಯಂತ್ರಣ ಈ ಪೊಲೀಸರ ಪಾಲಿಗೆ ಸವಾಲಾಗಿದೆ. ಶಾಲಾ-ಕಾಲೇಜು ಬಳಿ ಅಪಘಾತ ಪ್ರಮಾಣ ತಪ್ಪಿಸುವುದಕ್ಕಾಗಿ ಅಲ್ಲಿ ಟ್ರಾಫಿಕ್ ಸಿಬ್ಬಂದಿ ನಿಯೋಜಿಸುವ ಸಾಧ್ಯತೆಗಳಿವೆ. ಶಾಲಾ-ಕಾಲೇಜು ಮಕ್ಕಳು ಲೈಸನ್ಸಪಡೆಯದೇ ವಾಹನ ಓಡಿಸುವುದು ಪೊಲೀಸರ ಗಮನಕ್ಕೆ ಬಂದಿದ್ದು, ಅದಕ್ಕೆ ಸಹ ಇದೀಗ ನಿಯಂತ್ರಣ ಬೀಳಲಿದೆ. ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಟ್ರಾಫಿಕ್ ಠಾಣೆ ಸಿಬ್ಬಂದಿ ಮೊದಲ ಪ್ರಯತ್ನ ನಡೆಸಲಿದ್ದಾರೆ. ಇದಾದ ನಂತರ ಟ್ರಾಫಿಕ್ ನಿಯಮ ಹಾಗೂ ಅದನ್ನು ಉಲ್ಲಂಘಿಸುವವರಿಗೆ ಕಾನೂನಿನಲ್ಲಿರುವ ಶಿಕ್ಷೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಲಿದ್ದಾರೆ. ಆ ಬಗ್ಗೆ ಸಾಕಷ್ಟು ಪ್ರಚಾರ ನೀಡಿದ ನಂತರ ನಿಯಮ ಉಲ್ಲಂಘಿಸುವವರ ವಿರುದ್ಧ ನಿರಂತರ ಪ್ರಕರಣಗಳನ್ನು ದಾಖಲಿಸಲಿದ್ದಾರೆ. ಇದರೊಂದಿಗೆ ನಗರ ಪ್ರದೇಶದಲ್ಲಿ ನಡೆಯುವ ಅಪಘಾತ ಪ್ರಕರಣಗಳು ಸಹ ಈ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತದೆ. ಅಪಘಾತ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಪೊಲೀಸರು ಚಿಂತನೆ ನಡೆಸಿ, ಆ ಬಗ್ಗೆ ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುತ್ತಾರೆ. ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಸಲಹೆಗಳನ್ನು ನೀಡುತ್ತಾರೆ. ಶಿರಸಿಯಲ್ಲಿ ಇಷ್ಟು ದಿನಗಳವರೆಗೆ ಖಾಕಿ ಬಣ್ಣದ ಬಟ್ಟೆ ಧರಿಸಿದ ಪೊಲೀಸರು ಮಾತ್ರ ಕಾಣಿಸುತ್ತಿದ್ದರು. ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಹಲವು ಕೆಲಸಗಳನ್ನು ಅವರೇ ನಿಭಾಯಿಸುತ್ತಿದ್ದರು. ಆದರೆ, ಇನ್ಮುಂದೆ ಬಿಳಿ ಬಟ್ಟೆ ಧರಿಸಿದ ಪೊಲೀಸರು ಸಹ ಈ ಊರಿನಲ್ಲಿ ಕಾಣಲಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಅವರು ಶಿಸ್ತು ಕ್ರಮ ಜರುಗಿಸಲಿದ್ದಾರೆ.