Loading...
  • aksharakrantinagarajnaik@gmail.com
  • +91 8073197439
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
18:45:00 2025-03-27

ರಥೋತ್ಸವದಲ್ಲಿ ಕಾಲು ಕಳೆದುಕೊಂಡವರಿಗೆ ಪರಿಹಾರದ ಬೇಡಿಕೆ.

News Details

ಉತ್ತರ ಕನ್ನಡ : ರಥೋತ್ಸವದಲ್ಲಿ ಕಾಲು ಕಳೆದುಕೊಂಡವರಿಗೆ ಸರಕಾರದಿಂದ ಪರಿಹಾರ ನೀಡುವಂತೆ ದಲಿತ ಸಮುದಾಯದ ಮುಖಂಡರು ಸಿದ್ದಾಪುರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿಯಲ್ಲಿ ಮಾರ್ಚ್ 8 ರಂದು ನಡೆದ ಶ್ರೀ ರಾಮೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ರಥದ ಚಕ್ರಕ್ಕೆ ಕಾಲು ಸಿಲುಕಿ ಗಾಯಗೊಂಡ ವೆಂಕಟರಮಣ ಹಸ್ಲರ್ ಇವರು ಒಂದು ಕಾಲು ಕಳೆದು ಕೊಂಡಿದ್ದಾರೆ ಅವರ ಕುಟುಂಬ ಕ್ಕೆ ಸರಕಾರ ಪರಿಹಾರ ನೀಡಬೇಕು ಮತ್ತು ಅವರ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ, ಅರೆ ಸರ್ಕಾರಿ ಅಥವಾ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಬೇಕು ಎಂದು ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ ಬೋರ್ಕರ್ ಮನವಿ ಮಾಡಿದರು. ಅವರು ಗುರುವಾರ ತಾಲೂಕ ಆಡಳಿತ ಸೌಧದಲ್ಲಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಇವರ ಕುಟುಂಬವು ಬಡ ಕುಟುಂಬ ವಾಗಿದ್ದು ಯಾವುದೇ ಜಮೀನು ಇವರು ಹೊಂದಿಲ್ಲಾ. ವೆಂಕಟರಮಣ ಅವರ ಕೂಲಿ ಕೆಲಸದಲ್ಲೇ ಜೀವನ ನಡೆಯುತ್ತಿದ್ದರು. ಆದರೆ ಅವರು ಇನ್ನು ಮುಂದೆ ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲಾ ಹಾಗಾಗಿ ಅವರ ಸಮಸ್ಯೆ ಮನಗಂಡು ಸರಕಾರ ಸ್ಥಳೀಯ ಶಾಸಕರು ಉಸ್ತುವಾರಿ ಮಂತ್ರಿಗಳು ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಚಿಕಿತ್ಸೆಗೆ ಸಹಕರಿಸಿದ ದೇವಾಲಯದ ಆಡಳಿತೈ ಕಮಿಟಿ ಅವರಿಗೆ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ, ಇಟಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಅಲ್ಟ್ರಾಸಿಟಿ ಕಮಿಟಿ ಸದಸ್ಯ ಕಿರಣ್ ಕುಮಾರ್, ಅಣ್ಣಪ್ಪ ಶಾನ್ ಬಾಳೆಗದ್ದೆ, ಈಶ್ವರ ವೆಂಕಟರಮಣ ಹಸ್ಲರ್, ಕಮಲಾಕರ ಜೋಗಳೇಕರ್ ಮತ್ತಿತರರು ಉಪಸ್ಥಿತರಿದ್ದರು.