
0:00:00
2025-05-13
ಕಾರವಾರ: ಮದ್ಯ ಮಾರಾಟದಲ್ಲಿ ತೊಡಗಿದ್ದ ಮಹಿಳೆ ಬಂಧಿತ
News Details
ಕಾರವಾರದ ದೇವಳಮಕ್ಕಿಯಲ್ಲಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಮಹಿಳೆಯ ವಿರುದ್ಧ ಪೊಲೀಸರು ಸಿಡಿದೆದ್ದಿದ್ದಾರೆ. ಆ ಮಹಿಳೆಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ದೇವಳಮಕ್ಕಿಯ ಮಳಾರದಲ್ಲಿ ನಮಿತಾ ಭಂಡಾರಿ ಮದ್ಯ ಮಾರಾಟ ಮಾಡುತ್ತಿದ್ದರು. ಇದನ್ನು ಅರಿತ ಮಲ್ಲಾಪುರ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೋರಾಣಿ ನಮಿತಾ ಭಂಡಾರಿ ಅವರ ಅಕ್ರಮ ದಂಧೆಗೆ ಕಡಿವಾಣ ಹಾಕಿದರು. ದೇವಳಮಕ್ಕಿಯಿಂದ ಬಣಗೆಗೆ ಹೋಗುವ ದಾರಿಯಲ್ಲಿ ಮದ್ಯ ಮಾರಾಟ ಮಾಡುತ್ತಿರುವಾಗ ನಮಿತಾ ಭಂಡಾರಿ ಪೊಲೀಸರ ಬಳಿ ಸಿಕ್ಕಿಬಿದ್ದರು.
ನಮಿತಾ ಭಂಡಾರಿ ಅದೇ ಸ್ಥಳದಲ್ಲಿ ಮದ್ಯ ಸೇವನೆಗೆ ಸಹ ಅವಕಾಶ ಮಾಡಿಕೊಟ್ಟಿದ್ದರು. ಯಾವುದೇ ಪರವಾನಿಗೆ ಇಲ್ಲದೇ ಮದ್ಯ ಮಾರಾಟ ಹಾಗೂ ಸೇವನೆಯ ಬಗ್ಗೆ ಅಲ್ಲಿನವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಖಚಿತ ಮಾಹಿತಿ ಆಧರಿಸಿ ಮೇ 11ರ ಮಧ್ಯಾಹ್ನ ಪೊಲೀಸರು ದಾಳಿ ಮಾಡಿದರು. ಈ ವೇಳೆ ಬಗೆ ಬಗೆಯ ಮದ್ಯಗಳ ಜೊತೆ ಮದ್ಯ ಮಾರಾಟಗಾರ್ತಿಯನ್ನು ಪೊಲೀಸರು ವಶಕ್ಕೆಪಡೆದರು.