
ಶಿರಸಿಯಲ್ಲಿ ಗುಜುರಿ ಅಂಗಡಿಗೆ ಬೆಂಕಿ!
News Details
ಶಿರಸಿ ಮಂಜುವಳ್ಳಿ ಕ್ರಾಸಿನ ಬಳಿಯಿದ್ದ ಗುಜುರಿ ಅಂಗಡಿಯಲ್ಲಿ ಅಗ್ನಿ ಅವಘಡ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ನಡೆಯದಂತೆ ತಡೆದಿದ್ದಾರೆ.
ಶನಿವಾರ ರಾತ್ರಿ ಗುಜುರಿ ಅಂಗಡಿ ಹೊತ್ತಿ ಉರಿದಿದೆ. ಅಲ್ಲಿ ಸಂಗ್ರಹಿಸಲಾದ ರಟ್ಟು ಹಾಗೂ ಕಾಗದಗಳಿಂದ ಜ್ವಾಲೆ ಇನ್ನಷ್ಟು ದೊಡ್ಡದಾಗಿದೆ. ಪರಿಣಾಮ ಗೋದಾಮು ಸಂಪೂರ್ಣ ಸುಟ್ಟು ಕರಕಲಾಗಿದೆ.
ಗೋದಾಮಿನಲ್ಲಿದ್ದ ಎರಡು ಸಿಲೆಂಡರ್ ಸಹ ಸ್ಪೋಟವಾಗಿದೆ. ಜೊತೆಗೆ ಅಲ್ಲಿರಿಸಿದ್ದ ಪಿಕಪ್ ವಾಹನ ಬೂದಿಯಾಗಿದೆ. ಫಾವಿದ್ ಶೇಖ್ ಎಂಬಾತರಿಗೆ ಸೇರಿದ ಗುಜುರಿ ಗೋದಾಮು ಅದಾಗಿದ್ದು, ಲಕ್ಷಾಂತರ ರೂ ಹಾನಿ ಸಂಭವಿಸಿದೆ.
ದೊಡ್ಡ ಪ್ರಮಾಣದಲ್ಲಿ ಬೆಂಕಿ ನೋಡಿದ ಜನ ಅಗ್ನಿಶಾಮಕದಳಕ್ಕೆ ಫೋನ್ ಮಾಡಿದರು. ಕತ್ತಲಿನಲ್ಲಿಯೂ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ನಿರಂತರ ನೀರು ಹಾಯಿಸಿ ಬೆಂಕಿ ಆರಿಸಿದರು.
ಅಗ್ನಿಶಾಮಕ ಅಧಿಕಾರಿ ಲಕ್ಷಣ ಪಟಗಾರ್ ಅವರು ಸಾಹಸದಿಂದ ಬೆಂಕಿ ಆರಿಸುವ ಕೆಲಸ ಮಾಡಿದರು. ಸಿಬ್ಬಂದಿ ಧನಂಜಯ, ಪ್ರವೀಣ, ರಮೇಶ, ಜುಬೇರ್, ಮಂಜುನಾಥ ಹಾಗೂ ದುಂಡಪ್ಪ ಸೇರಿ ಅಪಾರ ಪ್ರಮಾಣದಲ್ಲಿ ನೀರು ಹಾಯಿಸಿದರು.