Loading...
  • aksharakrantinagarajnaik@gmail.com
  • +91 8073197439
Total Visitors: 3706
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-05-11

ಮೀನುಗಾರರಿಗೆ ಲಾಭವಿಲ್ಲದ 9.85 ಕೋಟಿ ರೂ ವೆಚ್ಚದ ಭಟ್ಕಳ ಮೀನು ಮೇಳ!

News Details

2024ರ ನವೆಂಬರಿನಲ್ಲಿ ಭಟ್ಕಳದಲ್ಲಿ ಮೂರು ದಿನ ಮೀನು ಮೇಳ ನಡೆದಿದ್ದು, ಇದಕ್ಕಾಗಿ ಸರ್ಕಾರ 9.85 ಕೋಟಿ ರೂ ವೆಚ್ಚ ಮಾಡಿದೆ. ಈ ಮೇಳದಿಂದ ಮೀನುಗಾರರಿಗೆ ಮಾತ್ರ ಯಾವುದೇ ಪ್ರಯೋಜನವಾಗಿಲ್ಲ!

2024ರ ನವೆಂಬರ್ 21ರಿಂದ 23ರವರೆಗೆ ಭಟ್ಕಳದಲ್ಲಿ ಮೀನು ಮೇಳ ನಡೆಯಿತು. ಈ ಮೇಳದಲ್ಲಿ ಭಾಗವಹಿಸಿದ ಮೀನುಗಾರರಿಗೆ ಹೆಚ್ಚುವರಿ ಯಾವ ಸೌಲಭ್ಯವೂ ಸಿಗಲಿಲ್ಲ. ನಿತ್ಯವೂ ಸಮುದ್ರದ ಮೀನು ನೋಡುತ್ತಿದ್ದವರಿಗೆ ಅಕ್ವೇರಿಯಂ'ನಲ್ಲಿದ್ದ ಬಣ್ಣ ಬಣ್ಣದ ಮೀನು ತೋರಿಸಲಾಯಿತು. ಸ್ಪರ್ಧಾ ಕಾರ್ಯಕ್ರಮದ ನೆಪದಲ್ಲಿ ಒಂದಷ್ಟು ಬಹುಮಾನ ನೀಡಲಾಯಿತು. ಇದನ್ನು ಬಿಟ್ಟು ಮೀನುಗಾರರ ಅಭಿವೃದ್ಧಿಗಾಗಿ ಈ ಮೇಳೆ ಕಿಂಚಿತ್ತು ಉಪಯೋಗವಾಗಲಿಲ್ಲ.

ಮೊದಲು ಮೀನು ಮೇಳಕ್ಕೆ 2.40 ಕೋಟಿ ರೂ ವೆಚ್ಚ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು. ಮತ್ಸ್ಯಮೇಳದ ವೇದಿಕೆ ನಿರ್ಮಾಣಕ್ಕೆ 30 ಲಕ್ಷ ರೂ, ಪ್ರಚಾರಕ್ಕಾಗಿ 30 ಲಕ್ಷ ರೂ, ಮೇಳ ಆಯೋಜನೆಗೆ 75 ಲಕ್ಷ ರೂ, ಕರಪತ್ರ ವಿತರಣೆಗೆ 10 ಲಕ್ಷ ರೂ, ಸ್ಥಳ ಬಾಡಿಗೆ 15 ಲಕ್ಷ ರೂ, ಊಟೋಪಚಾರಕ್ಕೆ 30 ಲಕ್ಷ ರೂ, ವಸತಿಗೆ 15 ಲಕ್ಷ ರೂ, ನೆನಪಿನ ಕಾಣಿಕೆಗೆ 15 ಲಕ್ಷ ರೂ, ಸ್ಪರ್ಧಾ ಕಾರ್ಯಕ್ರಮಗಳಿಗೆ 20 ಲಕ್ಷ ರೂ ಸೇರಿ 2.40 ಕೋಟಿ ರೂ ವೆಚ್ಚ ಮಾಡುವ ಬಗ್ಗೆ ಮೊದಲು ನಿರ್ಧರಿಸಲಾಗಿತ್ತು. ಆದರೆ, ಈ ನಿರೀಕ್ಷೆಗೂ ಮೀರಿ 9.85 ಕೋಟಿ ರೂ ಮೀನು ಮೇಳಕ್ಕೆ ವೆಚ್ಚವಾಯಿತು. ಆ ವೆಚ್ಚ ಪಾವತಿ ಆರ್ಥಿಕ ಇಲಾಖೆಗೆ ದೊಡ್ಡ ಹೊರೆಯಾಯಿಯಿತು.

ಸರ್ಕಾರಿ ನಿಯಮಗಳ ಪ್ರಕಾರ ಕಾರ್ಯಕ್ರಮ ಆಯೋಜಿಸುವ ಮುನ್ನ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ಅದಕ್ಕೆ ತಗಲುವ ವೆಚ್ಚಗಳ ಬಗ್ಗೆ ಆರ್ಥಿಕ ಇಲಾಖೆಗೆ ತಿಳಿಸಿ ಅನುಮೋದನೆ ಪಡೆಯಬೇಕು. ಕಾರ್ಯಕ್ರಮದಿಂದ ಆಗುವ ಉಪಯೋಗಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಆರ್ಥಿಕ ಇಲಾಖೆಯ ಅನುಮೋದನೆ ದೊರೆತ ನಂತರವೇ ಕಾರ್ಯಕ್ರಮ ನಡೆಸಬೇಕು. ಆದರೆ, ಭಟ್ಕಳದಲ್ಲಿ ನಡೆದ ಮೀನು ಮೇಳಕ್ಕೆ ಈ ಯಾವ ನಿಯಮವೂ ಅನ್ವಯವಾಗಿಲ್ಲ!

2024ರ ನವೆಂಬರಿನಲ್ಲಿ ಕಾರ್ಯಕ್ರಮದ ಸಿದ್ಧತೆ ನಡೆದರೂ ಅದಕ್ಕೆ ಸಂಬAಧಿಸಿ ಆರ್ಥಿಕ ಇಲಾಖೆಗೆ ಯಾವುದೇ ಮಾಹಿತಿ ಇರಲಿಲ್ಲ. 9.85 ಕೋಟಿ ರೂ ವೆಚ್ಚದ ಬಗ್ಗೆಯೂ ಅಧಿಕಾರಿಗಳು ಅಂದಾಜು ಪ್ರತಿ ಸಲ್ಲಿಸಿರಲಿಲ್ಲ. ಹೀಗಾಗಿ ಕಾರ್ಯಕ್ರಮ ಮುಗಿದ ನಂತರ ಹಣ ಪಾವತಿಗಾಗಿ ಆರ್ಥಿಕ ಇಲಾಖೆಗೆ ಪತ್ರ ರವಾನೆಯಾಗಿದೆ. ಇದಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಪಡೆಯದಿರುವ ಬಗ್ಗೆ ಆಕ್ಷೇಪಿಸಿದೆ.

`ಇನ್ಮುಂದೆ ಆರ್ಥಿಕ ಇಲಾಖೆ ಅನುಮೋದನೆ ಪಡೆಯದೇ ಕಾರ್ಯಕ್ರಮ ನಡೆಸಬಾರದು. ಕಾರ್ಯಕ್ರಮ ನಡೆಸುವ ಮುನ್ನ ಪೂರ್ವಾನುಮತಿಯನ್ನು ಪಡೆಯಬೇಕು' ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತನಿಖಾ ವರದಿಗಳನ್ನು ಪ್ರಕಟಿಸುವ https://the-file.in/ ಈ ಹಗರಣವನ್ನು ಬೆಳಕಿಗೆ ತಂದಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ದಾಖಲೆಗಳಿಂದ ಮೀನು ಮೇಳದ ದುಂದುವೆಚ್ಚದ ವರದಿ ಹೊರ ಬಿದ್ದಿದೆ.