
ಆಧ್ಯಾತ್ಮದ ಜೊತೆ ಕೃಷಿ ಜಾಗೃತಿಗೆ ಸ್ವರ್ಣವಲ್ಲಿ ಸಂಸ್ಥಾನ ಮುಂದಾಗಿದೆ
News Details
ಎಲ್ಲಾ ಮಠ-ಮಾನ್ಯಗಳು ಆಧ್ಯಾತ್ಮಿಕ ಚಿಂತನೆ ಪ್ರಸರಿಸುವುದು ಸಾಮಾನ್ಯ. ಆದರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾದಲ್ಲಿರುವ ಸ್ವರ್ಣವಲ್ಲಿ ಸಂಸ್ಥಾನ ಆಧ್ಯಾತ್ಮಿಕ ಚಿಂತನೆಯ ಜೊತೆ ಕೃಷಿ ಜಾಗೃತಿ ಕಾರ್ಯಾಗಾರವನ್ನು ಸಹ ನಡೆಸುತ್ತಿದೆ.
ಅಕ್ಷರಾಭ್ಯಾಸ ಕಲಿಯುವ ಮುನ್ನವೇ ಮಕ್ಕಳಿಗೆ ವಿವಿಧ ಎಲೆ-ಬೀಜಗಳನ್ನು ಗುರುತಿಸುವ ಸ್ಪರ್ಧೆಯನ್ನು ಸ್ವರ್ಣವಲ್ಲಿ ಮಠ ಆಯೋಜಿಸುತ್ತದೆ. ಪುರುಷರಿಗೆ ತೆಂಗಿನ ಕಾಯಿ ಸುಲಿಯುವ ಸ್ಪರ್ಧೆ, ಮಹಿಳೆಯರಿಗೆ ಅಡಿಕೆ ಸಲಿಯುವ ಸ್ಪರ್ಧೆ ಸೇರಿ ಬಗೆ ಬಗೆಯ ಕೃಷಿ ಸ್ಪರ್ಧೆಗಳು ಇಲ್ಲಿ ನಡೆಯುತ್ತವೆ. ಕಳೆದ 18 ವರ್ಷಗಳಿಂದ ಸ್ವರ್ಣವಲ್ಲಿ ಮಠವೂ ಕೃಷಿ ಉತ್ತೇಜನಕ್ಕಾಗಿ ನಾನಾ ಬಗೆಯ ಪ್ರಯತ್ನ ನಡೆಸುತ್ತಿದ್ದು, `ಕೃಷಿ ಹಾಗೂ ಆಧ್ಯಾತ್ಮ'ದ ಸಮತೋಲನ ಕಾಪಾಡಿಕೊಳ್ಳುವ ಪ್ರಯತ್ನ ಈ ವರ್ಷವೂ ಮುಂದುವರೆದಿದೆ.
ಅAಗನವಾಡಿಗೆ ಹೋಗುವ ಮಕ್ಕಳನ್ನು ಮಠಕ್ಕೆ ಕರೆಯಿಸಿ ಅವರಿಗೆ ವಿವಿಧ ಎಲೆ, ಬೀಜಗಳನ್ನು ಪರಿಚಯಿಸಲಾಗುತ್ತದೆ. ಅದಾದ ನಂತರ ತರಕಾರಿಗಳನ್ನು ಗುರುತಿಸುವ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಲಾಗುತ್ತದೆ. ನೂರಾರು ಚಿಣ್ಣರು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗಿಯಾಗುತ್ತಿದ್ದು, ಅವರ ಪಾಲಕರು ಸಹ ಇದನ್ನು ಸಂಭ್ರಮಿಸುತ್ತಿದ್ದಾರೆ.
ಒಂದರಿAದ ನಾಲ್ಕನೇ ತರಗತಿಯ ಮಕ್ಕಳಿಗೆ ಕಾಳು, ಬೀಜಗಳನ್ನು ಗುರುತಿಸುವ ಸ್ಪರ್ಧೆ, 5ರಿಂದ 7ನೇ ತರಗತಿಯ ಮಕ್ಕಳಿಗೆ ವಿವಿಧ ಸಸ್ಯಗಳ ಎಲೆಗಳನ್ನು ಗುರುತಿಸುವ ಸ್ಪರ್ಧೆ ನಡೆಯುತ್ತದೆ. ಆ ಮೂಲಕ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಕೃಷಿ ಬಗ್ಗೆ ಆಸಕ್ತಿಮೂಡಿಸುವ ಪ್ರಯತ್ನ ಸೋಂದಾ ಶ್ರೀಗಳಿಂದ ನಡೆಯುತ್ತಿದೆ.
ಪ್ರೌಢಶಾಲಾ ಮಕ್ಕಳಿಗಾಗಿ ಮಠವೂ ಕೃಷಿ ರಸಪ್ರಶ್ನೆ ಸ್ಪರ್ಧೆ ಹಾಗೂ ಕೃಷ್ಣ ವಿಜ್ಞಾನ ಮಾದರಿ ಸ್ಪರ್ಧೆ ಆಯೋಜಿಸುತ್ತದೆ. `ಥಟ್ ಅಂತ ಹೇಳಿ' ಮಾದರಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಇಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪರಿಸರ, ಪ್ರಾಣಿ, ಪಕ್ಷಿ, ಜಲಮೂಲ, ಹವಾಮಾನ, ಅರಣ್ಯ, ಆಹಾರಗಳ ಕುರಿತು ಪ್ರಶ್ನೆಗಳಿರುತ್ತವೆ, ಸಾಕಷ್ಟು ಮಕ್ಕಳು ಚುಟುಕು ಹಾಗೂ ಚುರುಕಾಗಿ ಇಲ್ಲಿ ಭಾಗವಹಿಸುತ್ತಾರೆ.
ಕೃಷಿ ಜಯಂತಿ ಅಂಗವಾಗಿ ಮಠದ ವಿವಿಧ ಅಂಗಸAಸ್ಥೆಗಳಿAದ ರೈತರು, ರೈತ ಕುಟುಂಬದವರಿಗಾಗಿ ಸ್ಪರ್ಧೆ, ವಿವಿಧ ಕಾರ್ಯಕ್ರಮಗಳನ್ನು ಮಠ ಆಯೋಜಿಸುತ್ತದೆ. ಕೃಷಿ ಕ್ಷೇತ್ರದ ಸಾಧಕರಿಗೆ ವಿವಿಧ ಪ್ರಶಸ್ತಿ-ಸನ್ಮಾನಗಳನ್ನು ನೀಡಲಾಗುತ್ತದೆ. ಸಾಧಕ ಕೃಷಿಕರನ್ನು ಗುರುತಿಸಿ ಅವರನ್ನು ಉತ್ತೇಜಿಸುವಲ್ಲಿ ಸ್ವರ್ಣವಲ್ಲಿ ಮಠ ಮುಂಚೂಣಿಯಲ್ಲಿದೆ.
ಅoದ ಹಾಗೇ, ಮೇ 10 ಹಾಗೂ 11ರಂದು ಮಠದಲ್ಲಿ ಈ ಎಲ್ಲಾ ಬಗೆಯ ವಿಶೇಷತೆಗಳನ್ನು ಒಳಗೊಂಡ ಕೃಷಿ ಜಯಂತಿ ಕಾರ್ಯಕ್ರಮವೂ ನಡೆಯಲಿದೆ.