
ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆ ಕೋಡ್ ಬ್ಯಾಟಲ್ -2025" ಗೆ ಹಳಿಯಾಳದಲ್ಲಿ ಚಾಲನೆ
News Details
ಹ್ಯಾಕಥಾನ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆಯನ್ನು ಹೊರ ತರಲು ಸಹಕಾರಿಯಾಗುತ್ತಿದೆ ಅಲ್ಲದೇ ಸಾಮಾಜಿಕ ಸವಾಲುಗಳಿಗೆ ಪರಿಹಾರ ಒದಗಿಸಲು ಹ್ಯಾಕಥಾನ್ ಸ್ಪರ್ಧೆಯು ವೇದಿಕೆಯಾಗಿದೆ ಎಂದು ಅಡೊಬ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಶ್ರೀಪಾದ್ ಕೃಷ್ಣಮೂರ್ತಿ ಹೇಳಿದರು. ಪಟ್ಟಣದ ಕೆ ಎಲ್ ಎಸ್ ವಿ ಡಿ ಐ ಟಿ ಮಹಾವಿದ್ಯಾಲಯವು ಆಯೋಜಿಸಿರುವ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆ " ಕೋಡ್ ಬ್ಯಾಟಲ್ -2025" ಗೆ ಚಾಲನೆ ನೀಡಿ ಮಾತನಾಡಿದರು. ಸಮಾಜವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಪರಿಹಾರ ಸೂಚಿಸಲು ಇಂತಹ ಸ್ಪರ್ಧೆಗಳನ್ನು ಮಹಾವಿದ್ಯಾಲಯಗಳು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು. ಆಧುನಿಕ ತಂತ್ರಜ್ಞಾನದ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು. ಪ್ರಾಕ್ಸಿನ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ, ನಾರಾಯಣ ಟೊಸುರ್ ಅವರು " ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹಾವಿದ್ಯಾಲಯದ ಉಪಕ್ರಮವನ್ನು ಶ್ಲಾಘಿಸಿದರು. ಇಂಜಿನಿಯರಿಂಗ್ ಕೌಶಲ್ಯದೊಂದಿಗೆ ವಿದ್ಯಾರ್ಥಿಗಳು ಉತ್ತಮ ನಾಗರೀಕರಾಗಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ಮಹಾವಿದ್ಯಾಲಯವು ಆಯೋಜಿಸಿರುವ ಹ್ಯಾಕಥಾನ್ ಸ್ಪರ್ಧೆಗೆ ರಾಜ್ಯ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿರುವುದು ಉತ್ತಮ ಬೆಳವಣಿಗೆ ಎಂದರು. ಮಹಾವಿದ್ಯಾಲಯದ ಐ ಇ ಇ ಇ ಸಂಚಾಲಕ ಡಾ. ಅರುಣ ಕಾಖಂಡಕಿ, ಐ ಇ ಇ ಇ ವಿದ್ಯಾರ್ಥಿ ಸಂಚಾಲಕ ಹರ್ಷ ಹೇರಲಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ಸಂಚಾಲಕ ಪ್ರೊ. ಸುಧೀರ್ ಕುಲಕರ್ಣಿ ಸ್ವಾಗತಿಸಿದರು. ಪ್ರೊ. ಸೂರಜ್ ಕಡ್ಲೆ ವಂದಿಸಿದರು. ಹುಬ್ಬಳ್ಳಿಯ ಡೊಕೆಟ್ ರನ್ ಪ್ರೈ. ಲಿ. ಸಂಸ್ಥಾಪಕ ಅಜಯ್ ಕಬಾಡಿ, ಬೆಂಗಳೂರಿನ ಅಡ್ವಾನ್ಸ್ ಎಲೆಕ್ಟ್ರಾನಿಕ್ ಸೊಲ್ಯೂಷನ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಶಂಭಟ್ಟ ನವರ, ಬೆಂಗಳೂರಿನ ಆರ್ಕೆಟ್ರನ್ ಸಂಸ್ಥೆಯ ಸಾಫ್ಟ್ವೇರ್ ತಂತ್ರಜ್ಞರಾದ ನಿಶಾ ಎಚ್ ಹಾಗೂ ಪ್ರತಿಕ್ಷಾ ಎಂ , ಚೆನ್ನೈನ ಸ್ವೈಪ್ ವೈರ್ ಟೆಕ್ನಾಲಜೀಸ್ ಪ್ರೈ. ಲಿ ನ ಸಾಫ್ಟ್ವೇರ್ ತಂತ್ರಜ್ಞರಾದ ಪ್ರಶಾಂತ ಭಗತ್ ಮತ್ತು ವಿಕ್ರಾಂತ್ ಬಿ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆ ಗೆ ನಿರ್ಣಾಯಕರಾಗಿ ಆಗಮಿಸಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದ 20 ಮಹಾವಿದ್ಯಾಲಯದ 267 ವಿದ್ಯಾರ್ಥಿಗಳ 71 ತಂಡಗಳು ಭಾಗವಹಿಸಿವೆ.