
0:00:00
2025-04-24
ಮದುವೆಯಾಗದ ನೋವಿಗೆ ಯಲ್ಲಾಪುರದ ಸತೀಶ ಭಟ್ಟ ಆತ್ಮಹತ್ಯೆ
News Details
ಅರ್ದ ಆಯಸ್ಸು ಕಳೆದರೂ ಮದುವೆಗೆ ಕನ್ಯೆ ಸಿಗದ ಕಾರಣ ಯಲ್ಲಾಪುರದ ಸತೀಶ ಭಟ್ಟ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿ ಸತೀಶ ಭಟ್ಟ (50) ವಾಸವಾಗಿದ್ದರು. ಚಾಲಕರಾಗಿದ್ದ ಅವರಿಗೆ ಉತ್ತಮ ದುಡಿಮೆಯಿತ್ತು. ಆದರೆ, ಅವರಿಗೆ ಕಂಕಣ ಭಾಗ್ಯ ಮಾತ್ರ ಕೂಡಿ ಬಂದಿರಲಿಲ್ಲ. ಹೀಗಾಗಿ ಅವರು ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದರು.
ಮದುವೆ ಆಗಿಲ್ಲ ಎಂಬ ನೋವಿನಲ್ಲಿಯೇ ಸತೀಶ ಭಟ್ಟ ಅವರು ಸರಾಯಿಯ ಮೊರೆ ಹೋಗಿದ್ದರು. ಕಳೆದ ಒಂದು ವಾರದ ಹಿಂದೆ ಮಾಸ್ತಿಬೇಣದ ಹುಣಸೆಮನೆಗೆ ಸತೀಶ ಭಟ್ಟರು ಬಂದಿದ್ದರು. ಅಲ್ಲಿನ ಪರಿಚಯಸ್ಥರಾದ ಸುಬ್ರಾಯ ಹೆಗಡೆ ಅವರ ಮನೆಯಲ್ಲಿ ವಾಸವಾಗಿದ್ದ ಸತೀಶ ಭಟ್ಟರು ತೋಟದ ಮನೆಯ ಮೇಲ್ಚಾವಣಿಯ ತೊಲೆಗೆ ನೇಣು ಹಾಕಿಕೊಂಡರು.
ಬುಧವಾರ ಬೆಳಗ್ಗೆ ಅವರ ಶವ ನೋಡಿದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಉಮ್ಮಚ್ಗಿಯಲ್ಲಿರುವ ಸತೀಶ ಭಟ್ಟರ ಸಹೋದರಿ ಸುಧಾ ಭಟ್ಟ ಸ್ಥಳಕ್ಕೆ ಬಂದು ತಮ್ಮನ ನೆನೆದು ಕಣ್ಣೀರಾದರು. ಕುಟುಂಬದವರ ಜೊತೆ ಚರ್ಚಿಸಿದ ನಂತರ ಸುಧಾ ಭಟ್ಟ ಅವರು ಪೊಲೀಸ್ ಪ್ರಕರಣ ದಾಖಲಿಸಿದರು.