
ರಾಷ್ಟ್ರಧ್ವಜ ಉಲ್ಟಾ ಪ್ರದರ್ಶನ: pngtree.com ವಿರುದ್ಧ ಆಕ್ರೋಶ
News Details
ಚೀನಾದವರು ಅಭಿವೃದ್ಧಿಪಡಿಸಿದ pngtree.com ಎಂಬ ವೆಬ್‌ಸೈಟಿನಲ್ಲಿ ಭಾರತೀಯ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ಈ ವೆಬ್‌ಸೈಟಿನಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಲಾಗಿದೆ.
ಗುಣಮಟ್ಟದ ಫೋಟೋ ಡೌನ್‌ಲೋಡ್ ಉದ್ದೇಶದಿಂದ pngtree.com ವೆಬ್‌ಸೈಟ್ ಕಾರ್ಯನಿರ್ವಹಿಸುತ್ತಿದೆ. ಪ್ರಪಂಚದ ನಾನಾ ದೇಶದ ರಾಷ್ಟ್ರಧ್ವಜಗಳು ಇಲ್ಲಿ ಸಿಗುತ್ತದೆ. ಉಚಿತ ಹಾಗೂ 9 ರೂ ಹಣ ಪಾವತಿಸಿ ಧ್ವಜದ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಗ್ರಾಫಿಕ್ ಡಿಸೈನರ್, ಕಂಟೇಟ್ ಕ್ರಿಯೇಟರ್'ಗಳ ಅನುಕೂಲಕ್ಕಾಗಿ ಈ ವೆಬ್‌ಸೈಟ್ ಕಾರ್ಯ ನಿರ್ವಹಿಸುತ್ತಿದೆ.
ಅನೇಕರು ಈ ವೆಬ್‌ಸೈಟಿಗೆ ಭೇಟಿ ನೀಡುತ್ತಾರೆ. ತಮಗೆ ಅನುಗುಣವಾಗಿ ವಿವಿಧ ಫೋಟೋಗಳನ್ನು ಡೌನ್ಲೋಡ್ ಮಾಡುತ್ತಾರೆ. ಈ ರೀತಿ ವೆಬ್‌ಸೈಟಿನಲ್ಲಿ ಬಾವುಟ ಹುಡುಕಿದ ವ್ಯಕ್ತಿಯೊಬ್ಬರಿಗೆ ಧ್ವಜ ಉಲ್ಟಾ ಹಾರಾಟ ನಡೆದಿರುವುದು ಗೊತ್ತಾಗಿದೆ. ಇದನ್ನು ಖಂಡಿಸಿ ವೆಬ್‌ಸೈಟಿನವರಿಗೆ ಅವರು ರಿಪೋರ್ಟ ಸಹ ಮಾಡಿದ್ದಾರೆ. ಆದರೆ, ಈವರೆಗೂ ಧ್ವಜ ಸರಿಯಾಗಿಲ್ಲ. ಗೂಗಲ್'ನಲ್ಲಿ ಇಂಡಿಯನ್ ಪ್ಲಾಗ್ ಎಂದು ಹುಡುಕಿದಾಗ ಭಾರತೀಯ ರಾಷ್ಟ್ರಧ್ವಜ ಉಲ್ಟಾ ಹಾರಾಟ ನಡೆಸಿರುವುದು ಕಾಣಿಸುತ್ತಿದೆ.