
0:00:00
2025-04-21
ಬಂಕಿಕೊಡ್ಲದಲ್ಲಿ ಶಿಬಿರ – ಸ್ವಚ್ಚತಾ ಜಾಗೃತಿ ಜಾಥಾ ಸೆಳೆತ
News Details
ಗೋಕರ್ಣ ಬಳಿಯ ಬಂಕಿಕೊಡ್ಲದಲ್ಲಿರುವ ವಿದೇಶಿ ಮಹಿಳೆಯ ಶಂಕರ ಪ್ರಸಾದ ಫೌಂಡೇಷನ್‌ವತಿಯಿAದ ಆರಂಭವಾದ ಮಕ್ಕಳ ಬೇಸಿಗೆ ಶಿಬಿರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಾಗೂ ಕಸ ಎಸೆಯದಂತೆ ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಜಾಥಾ ನಡೆಯಿತು. ಬಂಕಿಕೊಡ್ಲ, ಹನೇಹಳ್ಳಿ ಮುಖ್ಯ ರಸ್ತೆಯ ಸುತ್ತ ರಸ್ತೆಯಲ್ಲಿ ಬಿದ್ದ ತ್ಯಾಜ್ಯವನ್ನ ಸಂಗ್ರಹಿಸಿ ಸೂಕ್ತ ವಿಲೇವಾರಿಗೆ ನೀಡಲಾಯಿತು. ಸ್ವಾಮಿಯೋಗರತ್ನಾರವರ ಮಾರ್ಗದರ್ಶನದಲ್ಲಿ ನಡೆದ ಈ ಅಭಿಯಾನದಲ್ಲಿ ಫೌಂಡೇಷನ್ ಸದಸ್ಯರು, ಶಿಕ್ಷಕರು,ಪಾಲಕರು, ಮಕ್ಕಳು ಪಾಲ್ಗೊಂಡಿದ್ದರು. ಪ್ರತಿ ವರ್ಷ ಬೇಸಿಗೆಯಲ್ಲಿ ವಿಶೇಷ ತರಬೇತಿ ನೀಡುವ ಮೂಲಕ ರಜೆಯಲ್ಲಿ ಮಕ್ಕಳ ಕೌಶಲ್ಯ ಹೆಚ್ಚಿಸುವ ಕಾರೈ ಮಾಡುತ್ತಿದ್ದು,ಇದರ ಜೊತೆ ಪರಿಸರ ಸ್ವಚ್ಚತೆಯ ಬಗ್ಗೆ ಪ್ರಾಯೋಗಿಕವಾಗಿ ಅರಿವು ಮೂಡಿಸಕಾಗುತ್ತಿದೆ.