
0:00:00
2025-04-19
ನಿವೃತ್ತ ಉದ್ಯೋಗಿ ಅಶೋಕ ಗುನಗಿ ಕ್ರಿಮಿನಾಶಕ ಸೇವಿಸಿ ಮೃತ್ಯು
News Details
ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದ ಕಾರವಾರದ ಅಶೋಕ ಗುನಗಿ ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದಾರೆ.
ಕಾರವಾರದ ಬಿಣಗಾದಲ್ಲಿನ ಗುನಗಿವಾಡದಲ್ಲಿ ಅಶೋಕ ಗುನಗಿ ವಾಸವಾಗಿದ್ದರು. ಏಪ್ರಿಲ್ 17ರಂದು ರಾತ್ರಿ 11ಗಂಟೆಗೆ ಅವರು ಎಲ್ಲರ ಜೊತೆ ಊಟ ಮಾಡಿ ಮಲಗಿದ್ದರು. ಬೆಳಗ್ಗೆ ಮೇಲೆ ಏಳಲು ಆಗದೇ ಹಾಸಿಗೆಯಲ್ಲಿ ಒದ್ದಾಡುತ್ತಿದ್ದರು.
ಇದನ್ನು ನೋಡಿದ ಅವರ ಮಗ ಅಕ್ಷಯ ಗುನಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಪರೀಕ್ಷಿಸಿದ ವೈದ್ಯರು `ಅಶೋಕ ಗುನಗಿ ವಿಷ ಸೇವಿಸಿದ್ದಾರೆ' ಎಂದು ತಿಳಿಸಿದರು. ಅಕ್ಷಯ ಗುನಗಿ ಅವರು ಮನೆಗೆ ಬಂದು ನೋಡಿದಾಗ ಮನೆ ಹಿಂದೆ ಕ್ರಿಮಿನಾಶಕದ ಬಾಟಲಿ ಸಿಕ್ಕಿತು. ಇದನ್ನು ಅರಿತ ವೈದ್ಯರು ಅಶೋಕ ಗುನಗಿ ಅವರಿಗೆ ವಾಂತಿ ಮಾಡಿಸಿದರು.
ಅದಾದ ನಂತರ ಚಿಕಿತ್ಸೆ ಮುಂದುವರೆಸಿದರು. ಆದರೆ, ಪ್ರಯೋಜನಕ್ಕೆ ಬರಲಿಲ್ಲ. ಏಪ್ರಿಲ್ 18ರಂದು ಅವರು ಸಾವನಪ್ಪಿದರು