Loading...
  • aksharakrantinagarajnaik@gmail.com
  • +91 8073197439
Total Visitors: 878
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-19

ಯಲ್ಲಾಪುರದ ಸೊನಗಾರ ಹಳ್ಳಿಯಲ್ಲಿ ಪಿಕಪ್-ಬೈಕ್ ಅಪಘಾತ; ಸವಾರಗೆ ಗಾಯ

News Details

ಯಲ್ಲಾಪುರದ ಮಾವಿನಮನೆ ಬಳಿಯ ಸೊನಗಾರ ಹಳ್ಳಿಯಲ್ಲಿ ಪಿಕಪ್ ಹಾಗೂ ಬೈಕ್ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಬೈಕ್ ಜಖಂ ಆಗಿದೆ.

ಬಾಸಲ್ ಗ್ರಾಮದ ಸೊನಗಾರ ಹಳ್ಳಿಯ ಅನಂತ ಗೌಡ ಅವರ ಮನೆ ಮುಂದೆ ಈ ಅಪಘಾತ ನಡೆದಿದ್ದು, ಪಿಕಪ್ ವಾಹನ ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಹೀಗಾಗಿ ಪಿಕಪ್ ಓಡಿಸುತ್ತಿದ್ದ ಹರನಗದ್ದೆಯ ಪ್ರಶಾಂತ ಮರಾಠಿ ವಿರುದ್ಧ ಅನಂತ ಗೌಡ ಅವರು ಪೊಲೀಸ್ ದೂರು ನೀಡಿದ್ದಾರೆ.

`ಏಪ್ರಿಲ್ 16ರಂದು ಬಾಸಲ್ ಕಡೆಯಿಂದ ಚಾವಡಿ ಕಡೆ ಜೋರಾಗಿ ಪಿಕಪ್ ವಾಹನ ಬಂದಿತು. ಎದುರಿನಿಂದ ನಿಧಾನವಾಗಿ ಬರುತ್ತಿದ್ದ ಬೈಕಿಗೆ ಪಿಕಪ್ ವೇಗವಾಗಿ ಗುದ್ದಿತು. ಅದರಿಂದ ಬೈಕ್ ಸವಾರನಿಗೆ ಪೆಟ್ಟಾಗಿದ್ದು, ಬೈಕ್ ಸಹ ಹಾನಿಗೊಳಗಾಗಿದೆ' ಎಂದು ಅನಂತ ಗೌಡ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

`ತಮ್ಮ ಮನೆ ಮುಂದೆ ವೇಗವಾಗಿ ವಾಹನ ಓಡಿಸಿದ ಪ್ರಶಾಂತ ಮರಾಠಿ ವಿರುದ್ಧ ಕಾನೂನು ಕ್ರಮ ಜರುಗಿಸಿ' ಎಂದವರು ಪೊಲೀಸ್ ದೂರಿನಲ್ಲಿ ಹೇಳಿದ್ದಾರೆ.