
0:00:00
2025-04-19
ಸಿದ್ದಾಪುರದಲ್ಲಿ ಬೈಕಿಗೆ ಕಾರು ಗುದ್ದಿ ನಾರಾಯಣ ನಾಯ್ಕರಿಗೆ ಪೆಟ್ಟು
News Details
ಸಿದ್ದಾಪುರದ ನಾರಾಯಣ ನಾಯ್ಕ ಅವರು ಸಂಚರಿಸುತ್ತಿದ್ದ ಬೈಕಿಗೆ ಕಾರು ಗುದ್ದಿದೆ. ಪರಿಣಾಮ ನಾರಾಯಣ ನಾಯ್ಕ ಅವರಿಗೆ ಅಲ್ಲಲ್ಲಿ ಪೆಟ್ಟಾಗಿದೆ.
ಸಿದ್ದಾಪುರದ ಹಲಗೇರಿಯ ನಾರಾಯಣ ನಾಯ್ಕ (63) ರೈತಾಪಿ ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 17ರ ಮಧ್ಯಾಹ್ನ ಸಿದ್ದಾಪುರ ಪೇಟೆಗೆ ಬಂದಿದ್ದ ಅವರು ಭಗತ್ ಸಿಂಗ್ ಸರ್ಕಲ್ ಹತ್ತಿರ ಬೈಕಿನಲ್ಲಿ ಹೋಗುತ್ತಿದ್ದರು. ಬಸ್ ನಿಲ್ದಾಣದ ಕಡೆಯಿಂದ ಸಾಗರ ಕಡೆ ಹೋಗುತ್ತಿದ್ದ ಕಾರು ಹಿಂದಿನಿ0ದ ಅವರ ಬೈಕಿಗೆ ಗುದ್ದಿತು.
ಶಿವಮೊಗ್ಗ ಹೊಸನಗರದ ಕಬೀರ ಎಚ್ ಬಿ ಆ ಕಾರು ಚಲಾಯಿಸುತ್ತಿದ್ದರು. ಅವರ ನಿಷ್ಕಾಳಜಿಯ ಕಾರು ಚಾಲನೆಯಿಂದ ನಾರಾಯಣ ನಾಯ್ಕ ಅವರು ಗಾಯಗೊಂಡರು. ತಲೆ ಹಾಗೂ ಕಾಲಿಗೆ ಗಾಯವಾಗಿದ್ದರಿಂದ ನಾರಾಯಣ ನಾಯ್ಕ ಅವರು ಆಸ್ಪತ್ರೆ ಸೇರಿದರು. ಅವರ ಸಹೋದರ ಜೈರಾಮ ನಾಯ್ಕ ಅವರು ಕಾರು ಚಾಲಕನ ವಿರುದ್ಧ ಪೊಲೀಸ್ ದೂರು ನೀಡಿದರು.