
0:00:00
2025-04-19
ಭಟ್ಕಳದ ವ್ಯಾಪಾರಿಯ ಸ್ಕೂಟರ್ ಕಳ್ಳತನ
News Details
ಭಟ್ಕಳದ ಮಾರಿಕಟ್ಟಾದಲ್ಲಿ ರೋಶನ್ ಪುಟ್‌ವೇರ್ ಅಂಗಡಿ ಹೊಂದಿರುವ ಜೈನುಲಾಬಿದ್ದಿನ್ ಅವರ ಸ್ಕೂಟರ್ ಕಳ್ಳತನವಾಗಿದೆ.
ಭಟ್ಕಳದ ಮುಗ್ದುಂ ಕಾಲೋನಿಯ ಜೈನುಲಾಬಿದ್ದಿನ್ ಅವರು ರೆಹಮನಿಯಾ ಬೇಕರಿ ಹಿಂದಿನ ಲೌನಾ ಕಾಂಪ್ಲೇಕ್ಸಿನಲ್ಲಿ ವಾಸವಾಗಿದ್ದಾರೆ. ಮಾರ್ಚ 6ರಂದು ಸಂಜೆ ಅವರು ತಮ್ಮ ಮನೆ ಕಂಪೌ0ಡಿನಲ್ಲಿ ಸುಜಕಿ ಸ್ಕೂಟರ್ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಅಲ್ಲಿ ಸ್ಕೂಟರ್ ಕಾಣಲಿಲ್ಲ. ಇಷ್ಟು ದಿನಗಳ ಕಾಲ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಅದಾಗಿಯೂ ಸಿಗದ ಕಾರಣ ಅವರು ಪೊಲೀಸ್ ದೂರು ನೀಡಿದರು. `50 ಸಾವಿರ ರೂ ಮೌಲ್ಯದ ಸ್ಕೂಟರ್ ಕಳ್ಳನನ್ನು ಹುಡುಕಿ. ತನ್ನ ಸ್ಕೂಟರ್ ಮರಳಿಸಿ' ಎಂದವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.