Loading...
  • aksharakrantinagarajnaik@gmail.com
  • +91 8073197439
Total Visitors: 3705
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
23:36:00 2025-03-14

ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯ

News Details

ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದ್ದು, ಸರಳ ಹಾಗೂ ಸುಲಭವಾಗಿ ಇಂಗ್ಲಿಷ್ ಕಲಿಕೆಗೆ ಆಸಕ್ತಿಯಿರುವವರಿಗಾಗಿ ಕಾರವಾರಲ್ಲಿ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್' ಶುರುವಾಗಿದೆ. ಭಾರತದ ವಿವಿಧ ಪ್ರದೇಶಗಳನ್ನು ಒಳಗೊಂಡು ಬಾಂಗ್ಲಾದೇಶ, ಅಮೇರಿಕಾ, ಅರಬ್ ದೇಶಗಳಲ್ಲಿಯೂ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್'ನ ಶಾಖೆಗಳಿವೆ. ಇದೀಗ ಕಾರವಾರದಲ್ಲಿಯೂ ಆನ್‌ಲೈನ್ ಮೂಲಕ ಆಂಗ್ಲ ಭಾಷೆ ಕಲಿಸುವ ತರಗತಿಗೆ ಚಾಲನೆ ದೊರೆತಿದೆ. ಕಾರವಾರದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹತ್ತಿರ ಈ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ. ಸದ್ಯ 17 ಕಡೆ ಆನ್‌ಲೈನ್ ಮೂಲಕ ಇಂಗ್ಲಿಷ್ ಕಲಿಕೆಯ ತರಬೇತಿ ನಡೆಯುತ್ತಿದೆ. ಭವಿಷ್ಯದಲ್ಲಿ ಆಫ್‌ಲೈನ್ ಮೂಲಕವೂ ಆಂಗ್ಲ ಭಾಷಾ ಕಲಿಕೆಗೆ ಒತ್ತು ನೀಡುವ ಉದ್ದೇಶ ಈ ಸಂಸ್ಥೆಯದ್ದಾಗಿದೆ. ಸ್ಯಾಮ್ ಸ್ಟಡಿ ಕ್ಲಬ್ ನಾ ಮಾಲಕಿ ಶಾಂಭವಿ ನಾಯರ್ ಅವರು `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್' ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. `ಕಾರವಾರದಲ್ಲಿ ಇಂಥ ತರಬೇತಿ ಕೇಂದ್ರ ತೆರೆದಿರುವುದು ಸಂತೋಷದ ಸಂಗತಿ. ಇಲ್ಲಿನವರ ಕೌಶಲ್ಯ ಅಭಿವೃದ್ಧಿಗೆ ಈ ಕೇಂದ್ರ ಸಹಕಾರಿ' ಎಂದವರು ಹೇಳಿದರು. `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್‌ನ ಮಾಲಕರಾದ ಪ್ಯಾಟ್ರಿಷಿಯ ಅಗಸ್ಥಿನ್ ಮಾತನಾಡಿ `ಶಿಬಿರಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಲಿಕಾ ಕೇಂದ್ರ ಸಹಾಯ ಮಾಡಲಿದೆ. ಇಂಗ್ಲೀಷ್ ಮಾತನಾಡುವ ಕಲೆ ಹಾಗೂ ಗುಣಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತದೆ' ಎಂದರು. ಉದ್ಘಾಟನೆ ವೇಳೆ ಯೂನಿಸ್ ಅಗಸ್ಥಿನ್, ವೈದ್ಯೆ ವಿಜಯಲಕ್ಷ್ಮಿ ನಾಯಕ್ ಇತರರಿದ್ದರು.