
ಉತ್ತರ ಕನ್ನಡದಲ್ಲಿ 3 ದಿನದಲ್ಲಿ 3 ಮಕ್ಕಳು ನೀರುಪಾಲು
News Details
ಕಳೆದ ಮೂರು ದಿನದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಮೂವರು ಮಕ್ಕಳು ನೀರಿಗೆ ಬಿದ್ದು ಸಾವನಪ್ಪಿದ್ದಾರೆ. ಕಾರವಾರ, ಹಳಿಯಾಳ ಹಾಗೂ ಮುಂಡಗೋಡಿನಲ್ಲಿ ಮಕ್ಕಳ ಸಾವಾಗಿದೆ.
ಕಾರವಾರದ ಬಸುಣಗಾ ಗ್ರಾಮದಲ್ಲಿ ರೂಪಾನಂದ (14) ಎಂಬಾತರು ಕಾಳಿ ನದಿಗೆ ಬಿದ್ದಿದ್ದಾರೆ. ಗುರುವಾರ ಅವರ ಶವ ಸಿಕ್ಕಿದೆ. ಕಟ್ಟಡಕ್ಕೆ ನೀರು ಹಾಕುವುದಕ್ಕಾಗಿ ರೂಪಾನಂದ ಅವರು ಕೊಡ ಹಿಡಿದು ನದಿ ಬಳಿ ತೆರಳಿದ್ದರು. ಕಾಲು ಜಾರಿ ನದಿಗೆ ಬಿದ್ದಿದ್ದರಿಂದ ಅವರು ಸಾವನಪ್ಪಿದರು.
ಹಳಿಯಾಳದ ಬೆಳವಟಗಿ ಗ್ರಾಮದಲ್ಲಿ ಕಾಳಗಿನಕೊಪ್ಪದ ಮಂಜು ದೇವರಮನಿ (17) ನೀರಿಗೆ ಬಿದ್ದು ಕೊನೆ ಉಸಿರೆಳೆದಿದ್ದಾರೆ. ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದ್ದು, ಇದಕ್ಕಾಗಿ ಸಂಬAಧಿಕರ ಮನೆಗೆ ಬಂದಿದ್ದ ಮಂಜು ದೇವರಮನಿ ಈಜಲು ಕೆರೆಗೆ ತೆರಳಿದ್ದರು. ಬುಧವಾರ ಮಧ್ಯಾಹ್ನ 3 ಗಂಟೆ ಅವಧಿಗೆ ಅವರು ಕೆರೆ ನೀರಿನಲ್ಲಿ ಮುಳುಗಿದರು. ಪೊಲೀಸರು ಶವ ಮೇಲೆತ್ತಿದರು.
ಮುಂಡಗೋಡಿನ ಗುಂಜಾವತಿಯಲ್ಲಿಯೂ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ನೀರಿಗೆ ಬಿದ್ದಿದೆ. ಮನೆ ಎದುರಿನ ತೊಟ್ಟಿಗೆ ಬಿದ್ದ ಎರಡುವರೆ ವರ್ಷದ ಮಗು ಅಲ್ಲಿಯೇ ಅಸುನಿಗಿದೆ. ವಿನಯ ಕುಂಬಾರ್ ಎಂಬ ಮಗು ನೀರಿಗೆ ಬಿದ್ದಿರುವುದನ್ನು ಗಮನಿಸಿದ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆತಂದರು. ಆದರೆ, ಪ್ರಯೋಜನವಾಗಲಿಲ್ಲ.