Loading...
  • aksharakrantinagarajnaik@gmail.com
  • +91 8073197439
Total Visitors: 3702
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
23:34:00 2025-03-14

ಮುಂದಿನಿoದ ಎಲ್ಲರೂ ಅಕ್ಕ.. ಅಕ್ಕ.. ಎನ್ನುತ್ತ ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ, ಬೆನ್ನ ಹಿಂದೆ ನನ್ನ ವಿರುದ್ಧ ಕುತಂತ್ರ ಮಾಡುತ್ತಾರೆ

News Details

ಮುಂದಿನಿoದ ಎಲ್ಲರೂ ಅಕ್ಕ.. ಅಕ್ಕ.. ಎನ್ನುತ್ತ ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ, ಬೆನ್ನ ಹಿಂದೆ ನನ್ನ ವಿರುದ್ಧ ಕುತಂತ್ರ ಮಾಡುತ್ತಾರೆ' ಎಂದು ಯಲ್ಲಾಪುರ ಪ ಪಂ ಸದಸ್ಯೆ ಪುಷ್ಪಾ ನಾಯ್ಕ ಸಾಮಾನ್ಯ ಸಭೆಯಲ್ಲಿ ಕಣ್ಣೀರಾದರು. ಶುಕ್ರವಾರ ನಡೆದ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಪುಷ್ಪಾ ನಾಯ್ಕ ಬಹಿರಂಗವಾಗಿ ತಮ್ಮ ನೋವು ತೋಡಿಕೊಂಡರು. `ಕಳೆದ 20 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ಹಣ ಪಡೆದು ಕೆಲಸ ಮಾಡುವ ಹಾಗಿದಿದ್ದರೆ ಈಗಲೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ. ಜನರ ಒಳಿತಿಗಾಗಿ ಅಭಿವೃದ್ಧಿ ಅನುದಾನ ನೀಡಿದರೆ ಕಮಿಶನ್ ಪಡೆದು ಕೆಲಸ ಮಾಡಿದ್ದಾರೆ ಎಂದು ನಮ್ಮವರೇ ಊಹಾಪೋಹ ಹಬ್ಬಿಸುತ್ತಾರೆ' ಎಂದು ಅಳಲು ತೋಡಿಕೊಂಡರು. `ಮತದಾರರ ಮನವಿ ಮೇರೆಗೆ ಸವಣಗೇರಿ ಬಳಿ ರಸ್ತೆ ಅಭಿವೃದ್ಧಿಗೆ 2.5 ಲಕ್ಷ ರೂ ಮಂಜೂರಿ ಮಾಡಲಾಗಿತ್ತು. ಮಂಜೂರಿ ಮಾಡುವ ವೇಳೆ ಯಾರೂ ಇದಕ್ಕೆ ತಕರಾರು ಸಲ್ಲಿಸಲಿಲ್ಲ. ಗುತ್ತಿಗೆದಾರ ಕೆಲಸ ಶುರು ಮಾಡಿದ ನಂತರ ಮುಖ್ಯಮಂತ್ರಿ ಕಚೇರಿಯವರೆಗೆ ದೂರು ಸಲ್ಲಿಸಿ ಸಮಸ್ಯೆ ಮಾಡಲಾಗಿದೆ. ಅಕ್ಕ.. ಅಕ್ಕ ಎಂದು ಕರೆಯುವ ಈ ಜನ ಅಲ್ಲಿ ಹಣ ಮಂಜೂರಿ ಮಾಡುವುದು ಕಾನೂನುಬಾಹಿರ ಎಂದು ಮುಂಚಿತವಾಗಿ ಒಂದು ಮಾತು ತಿಳಿಸಲಿಲ್ಲ' ಎಂದು ಅಸಮಧಾನವ್ಯಕ್ತಪಡಿಸಿದರು. `ತಕರಾರು ಸಲ್ಲಿಸುವ ಮೊದಲು ಭೂ ಪರಿವರ್ತನೆ ಆಗದ ಕ್ಷೇತ್ರಕ್ಕೆ ಹಣ ಮಂಜೂರಿ ಮಾಡಬೇಡಿ ಎಂದು ಒಂದು ಮಾತು ಹೇಳಬೇಕಿತ್ತು. ಎದುರಿನಿಂದ ಚನ್ನಾಗಿ ಮಾತನಾಡುವವರು ತೆರೆಮರೆಯಲ್ಲಿ ನಿಂತು ಕೊಂಕು ಮಾಡುವುದನ್ನು ಬಿಡಬೇಕು' ಎಂದು ಯಾರ ಹೆಸರನ್ನು ತೆಗೆದುಕೊಳ್ಳದೇ ಕಿವಿಮಾತು ಹೇಳಿದರು. `ಸವಣಗೇರಿ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಿ ಮಾಡಿದ್ದರಿಂದ ಪ ಪಂ ಅಧಿಕಾರಿಗಳಿಗೆ ಸಹ ತೊಂದರೆಯಾಗಿದೆ. ಕೆಲವರು ಸಾವಿರ ಜನರನ್ನು ಕರೆಯಿಸಿ ಪ್ರತಿಭಟನೆ ನಡೆಸುವುದಾಗಿ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ. ಯಾರಿಗೂ ತೊಂದರೆ ಮಾಡುವ ಉದ್ದೇಶವಿಲ್ಲದ ಕಾರಣ ಆ ಹಣವನ್ನು ಬದಲಿ ಕಾಮಗಾರಿಗೆ ಬಳಸುವಂತೆ ಪತ್ರ ಕೊಡುವೆ' ಎಂದು ಸಭೆಯಲ್ಲಿ ಅವರು ಸ್ಪಷ್ಠಪಡಿಸಿದರು. ಪುಷ್ಪಾ ನಾಯ್ಕ ಅವರ ಈ ನಿರ್ಣಯವನ್ನು ಅನೇಕರು ಚಪ್ಪಾಳೆ ಮೂಲಕ ಸ್ವಾಗತಿಸಿದರು.