
ಶರಳಗಿಯಲ್ಲಿ ಮನೆಮದ್ಯ ಪತ್ತೆ: ಗೋವಿಂದ ನಾಯ್ಕನಿಂದ ₹160 ವಶಕ್ಕೆ, ನ್ಯಾಯಾಲಯಕ್ಕೆ ಹಸ್ತಾಂತರ
News Details
ಸಿದ್ದಾಪುರದ ಶರಳಗಿಯಲ್ಲಿ ಗೋವಿಂದ ನಾಯ್ಕ ತಮ್ಮ ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಪಿಎಸ್‌ಐ ಗೀತಾ ಶಿರ್ಶಿಕರ್ ಅವರು ಪತ್ತೆ ಹಚ್ಚಿದ್ದಾರೆ. ಮದ್ಯ ಮಾರಾಟಕ್ಕೆ ತಡೆ ಒಡ್ಡಿದ ಅವರು ಅಕ್ರಮ ಮದ್ಯ ಮಾರಾಟದಿಂದ ಸಂಪಾದಿಸಿದ್ದ 160ರೂ ಹಣವನ್ನು ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
75 ವರ್ಷದ ಗೋವಿಂದ ನಾಯ್ಕ ಅವರು ತಮ್ಮ ಮನೆಯಲ್ಲಿ ಮದ್ಯವನ್ನು ದಾಸ್ತಾನು ಮಾಡುತ್ತಿದ್ದರು. ಮನೆ ಮುಂದೆ ಅವರು ಮದ್ಯಪ್ರಿಯರಿಗೆ ಉಪಚರಿಸುತ್ತಿದ್ದರು. ಕಾನೂನುಬಾಹಿರವಾಗಿ ಅವರು ಮದ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದರು. ಈ ವಿಷಯ ಅರಿತ ಸಿದ್ದಾಪುರ ಪಿಎಸ್‌ಐ ಗೀತಾ ಶಿರ್ಶಿಕರ್ ಏಪ್ರಿಲ್ 10ರ ಸಂಜೆ ಅವರು ಶಿರಳಗಿಯ ಗೋವಿಂದ ನಾಯ್ಕ ಅವರ ಮನೆ ಮೇಲೆ ದಾಳಿ ಮಾಡಿದರು.
ಕೆಲವರು ಕುಡಿದು ಬಿಟ್ಟಿದ್ದ ಮದ್ಯದ ಪ್ಯಾಕೇಟ್‌ಗಳು ಮನೆ ಮುಂದೆ ಬಿದ್ದಿದ್ದವು. ಪ್ಲಾಸ್ಟಿಕ್ ಲೋಟಗಳು ಅಲ್ಲಿ ಕಾಣಿಸಿದವು. ಮದ್ಯ ಮಾರಾಟವನ್ನು ಖಚಿತಪಡಿಸಿಕೊಂಡ ಅವರು ಅಲ್ಲಿದ್ದ ಇನ್ನಿತರ ಮದ್ಯದ ಪ್ಯಾಕೇಟ್'ಗಳನ್ನು ವಶಕ್ಕೆಪಡೆದರು. `ಅಕ್ರಮ ಮದ್ಯ ಮಾರಾಟ ತಪ್ಪು' ಎಂದು ತಿಳುವಳಿಕೆ ನೀಡಿ, ಪ್ರಕರಣವನ್ನು ದಾಖಲಿಸಿದರು.