Loading...
  • aksharakrantinagarajnaik@gmail.com
  • +91 8073197439
Total Visitors: 800
ನೀವು ತಿಳಿಯಬೇಕಾದ ಪ್ರಮುಖ ಸುದ್ದಿಗಳು! | ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಘೋಷಣೆ! | ಬ್ಯಾಂಕುಗಳ ವಹಿವಾಟಿನಲ್ಲಿ ಹೊಸ ಮಾರ್ಗಸೂಚಿಗಳು | ಕ್ರೀಡಾ ಪ್ರಪಂಚದಲ್ಲಿ ಭಾರೀ ಸುದ್ದಿ! | ನಮ್ಮ ಆರೋಗ್ಯಕ್ಕಾಗಿ ಸರಳ ಮನೆಮದ್ದಿನ ಪರಿಹಾರಗಳು | ರಾಜಕೀಯದಲ್ಲಿ ಮತ್ತೆ ಬಿರುಸು – ಏನಾಗುತ್ತಿದೆ? | ನಿವೇಶನ ದರಗಳು ಹೆಚ್ಚಳ – ನಿಮ್ಮ ಹಣ ಹೂಡಲು ಇವೇ ಅವಕಾಶಗಳು | ಫಿಲ್ಮ್ ಇಂಡಸ್ಟ್ರಿಯಲ್ಲಿ ಹೊಸ ಸಿನಿಮಾ ಬಿಡುಗಡೆ! | ಅತ್ಯಾಧುನಿಕ ತಂತ್ರಜ್ಞಾನ – ಮುಂದಿನ ಪೀಳಿಗೆಯ ಗ್ಯಾಜೆಟ್‌ಗಳು | ನಿಮ್ಮ ಊರಿನ ಸ್ಥಳೀಯ ಸುದ್ದಿಗಳನ್ನು ಇಲ್ಲಿ ನೋಡಿ! |
news
0:00:00 2025-04-10

ಬೆಲೆ ಏರಿಕೆ ವಿರುದ್ಧ ಬಿಜೆಪಿಯ ಜನಾಕ್ರೋಶ ಯಾತ್ರೆ ವಿಘಟಿತ: ಕಾಂಗ್ರೆಸ್ ಸ್ವಾಗತ

News Details

ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ನಡೆಸಿದ ಕೇಂದ್ರ ಬಿಜೆಪಿ ಸರ್ಕಾರವೂ ಇದೀಗ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಲು ಸಜ್ಜಾಗಿದೆ. ಈ ಜನಾಕ್ರೋಶ ಯಾತ್ರೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೇ, ಎಲ್ಲಾ ರಾಜ್ಯಕ್ಕೂ ಅನ್ವಯಿಸಿದರೆ ಕಾಂಗ್ರೆಸ್ ಅದನ್ನು ಸ್ವಾಗತಿಸುತ್ತದೆ' ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ಟ ಮೆಣಸುಪಾಲ್ ಹೇಳಿದ್ದಾರೆ.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕೇಂದ್ರ ಸರಕಾರ ಪೆಟ್ರೋಲ್, ಸಿಲೆಂಡರ್ ಸೇರಿ ಅಗತ್ಯ ವಸ್ತು ಬೆಲೆ ಏರಿಕೆ ಮಾಡಿದ ಬಗ್ಗೆ ಬಿಜೆಪಿಗರು ಮಾತನಾಡುತ್ತಿಲ್ಲ. ರಾಜ್ಯ ಸರ್ಕಾರ ರೈತರ ಅನುಕೂಲಕ್ಕಾಗಿ ಹಾಲಿನ ಬೆಲೆ ಏರಿಕೆ ಮಾಡಿದರೆ ಅದನ್ನು ಬಿಜೆಪಿ ವಿರೋಧಿಸುತ್ತಿದೆ' ಎಂದು ಆಕ್ರೋಶವ್ಯಕ್ತಪಡಿಸಿದರು.

`ಹಾಲಿನ ದರ ಏರಿಕೆಯಿಂದ ನೇರವಾಗಿ ರೈತರಿಗೆ ಲಾಭವಾಗಿದೆ. ಪ್ರತಿ ಲೀಟರಿಗೆ 4 ರೂ ರೈತರಿಗೆ ಹೆಚ್ಚುವರಿಯಾಗಿ ಸಿಗುತ್ತಿದೆ. ಇದನ್ನು ಸಹಿಸದ ಬಿಜೆಪಿ ರೈತ ವಿರೋಧಿಯಾಗಿದೆ' ಎಂದು ದೂರಿದರು. `ಬಿಜೆಪಿಗರು ಅಲ್ಪ ಸಂಖ್ಯಾತ ತುಷ್ಠಿಕರಣ ಎಂದು ಹೇಳುತ್ತಾರೆ. ರಂಜಾನ್ ಸಂದರ್ಭದಲ್ಲಿ ಕೇಂದ್ರ ಸರಕಾರ ಮುಸ್ಲಿಮರಿಗೆ ಕೊಡುಗೆ ನೀಡಿದ್ದು, ಬಿಜೆಪಿಗರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.

`ಅಲ್ಪ ಸಂಖ್ಯಾತ ಎಂದರೆ ಮುಸ್ಲಿಂ ಮಾತ್ರವಲ್ಲ. ದಡ್ಡ ಪರದೇಶಿ ಬಿಜೆಪಿಗರಿಗೆ ಈ ಸತ್ಯ ಗೊತ್ತಿಲ್ಲ' ಎಂದು ಟೀಕಿಸಿದರು. `ಈಚೆಗೆ ಆ ಸಮುದಾಯದವರು ಜಾತ್ರೆಯಲ್ಲಿ ಅಂಗಡಿ ಹಾಕುವುದು ಬೇಡ. ಈ ಸಮುದಾಯದವರ ಬಳಿ ವ್ಯಾಪಾರ ಬೇಡ ಎನ್ನುವ ವಾದ ಹೆಚ್ಚಾಗಿದೆ. ಮಸೀದಿ ಮುಂದೆ ಹನುಮಾನ್ ಚಾಲಿಸ್ ಓದುವವರು, ರಸ್ತೆ ಅಂಚಿನಲ್ಲಿ ಭಗವದ್ಗೀತೆ ಪಠಿಸುವವರಿಂದ ಧರ್ಮ ಬೀದಿಗೆ ಬರುವಂತಾಗಿದೆ. ದೇವಾಲಯಗಳಲ್ಲಿಯೇ ಪೂಜೆಗೆ ಅರ್ಚಕರು ಸಿಗದಿರುವಾಗ ಮಸೀದಿಯಲ್ಲಿನ ದೇವಾಲಯ ಹುಡುಕುವ ಅವಶ್ಯಕತೆ ಏನಿದೆ? ಎಂದು ಎನ್ ಕೆ ಭಟ್ಟ ಮೆಣಸುಪಾಲ್ ಪ್ರಶ್ನಿಸಿದರು.

ಗ್ಯಾರಂಟಿ ತಾಲೂಕಾ ಅಧ್ಯಕ್ಷ ಉಲ್ಲಾಸ ಶಾನಭಾಗ ಮಾತನಾಡಿ `ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಕೇಂದ್ರ ಬಿಜೆಪಿ ಕಾರಣ. ಅಭಿವೃದ್ದಿ ಸಾಧನೆ ಆಧಾರದಲ್ಲಿ ಪಕ್ಷ ಬೆಳಸುವ ಬದಲು ಧರ್ಮ ಧರ್ಮದ ನಡುವೆ ಕಿಚ್ಚು ಹಚ್ಚುವ ಪ್ರಯತ್ನ ಸರಿಯಲ್ಲ' ಎಂದು ಅಸಮಾಧಾನ ಹೊರಹಾಕಿದರು.

ರವಿ ಭಟ್ಟ ಬರಗದ್ದೆ ಮಾತನಾಡಿ `ಧರ್ಮ ರಾಷ್ಟ್ರೀಯತೆ ಪ್ರಜ್ಞೆ ಎಂಬುದು ಬಿಜೆಪಿಗರಿಗೆ ಮಾತ್ರ ಸೀಮಿತವಲ್ಲ' ಎಂದರು. ಪ್ರಶಾಂತ ಸಭಾಹಿತ ಮಾತನಾಡಿ `ಹಾಲು ದರ ಏರಿಸಿದ್ದರಿಂದ ರೈತರಿಗೆ ಲಾಭವಾಗಿದೆ' ಎಂದು ಪುನರುಚ್ಚರಿಸಿದರು. ಕಾಂಗ್ರೆಸ್ ಪ್ರಮುಖರಾದ ಟಿ ಸಿ ಗಾಂವ್ಕಾರ, ವಿ ಎಸ್ ಭಟ್ಟ, ಮುಶರತ್ ಖಾನ್ ಇದ್ದರು.